ಐವರ್ನಾಡು : ತೋಟದಿಂದ ವಿದ್ಯುತ್ ಕೇಬಲ್, ಏಣಿ ಕಳವು – ಪ್ರಕರಣ ದಾಖಲು

0

ಐವರ್ನಾಡಿನಲ್ಲಿ ತೋಟದಿಂದ ವಿದ್ಯುತ್ ಕೇಬಲ್ ಮತ್ತು ಅಲ್ಯೂಮಿನಿಯಂ ಏಣಿ ಕಳವಾಗಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಂದ್ರಶೇಖರ ಎ.ಎಂಬವರು ಪೊಲೀಸ್ ದೂರು ನೀಡಿದ್ದು ದೂರಿನಲ್ಲಿ ಐವರ್ನಾಡು ಗ್ರಾಮದಲ್ಲಿ ನಾನು ಅಡಿಕೆ ತೋಟವನ್ನು ಹೊಂದಿದ್ದು, ದಿನಾಂಕ; 01.03.2024ರಂದು ಪೂರ್ವಾಹ್ನ, ತನ್ನ ತೋಟಕ್ಕೆ ನೀರು ಹಾಯಿಸಲು ಹೋಗಿರುವ ಸಂದರ್ಭದಲ್ಲಿ, ಆರೋಪಿಗಳಾದ ಪ್ರಮೋದ್ ಮತ್ತು ಅಪೂರ್ವ ಎಂಬವರು, ತನ್ನ ಸ್ವಾಧೀನದಲ್ಲಿರುವ ಅಡಿಕೆ ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿ, ಸುಮಾರು | 100 ಮೀಟರ್ ಉದ್ದದ ವಿದ್ಯುತ್ ಕೇಬಲ್ ಗಳು ಮತ್ತು 1 ಅಲ್ಯೂಮಿನಿಯಮ್ ಏಣಿಯನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂಪಾಯಿ 16,000/- ಆಗಿರುತ್ತದೆ ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.