ಅಡ್ಕಾರು ಅಂಬಾಡಿಮೂಲೆ ಶ್ರೀ ವಿಷ್ಣುಮೂರ್ತಿ ಹಾಗೂ ಗುಳಿಗ ದೈವಸ್ಥಾನಕ್ಕೆ ಡಾ. ಆರ್.ಕೆ. ನಾಯರ್ ಭೇಟಿ

0

ಜೀರ್ಣೋದ್ಧಾರಗೊಂಡು ಶ್ರೀ ವಿಷ್ಣುಮೂರ್ತಿ ಹಾಗೂ ಗುಳಿಗ ದೈವಗಳ ಪ್ರತಿಷ್ಠೆ ಹಾಗೂ ದೈವಗಳ ಕೋಲ ನಡೆಯಲಿರುವ ಜಾಲ್ಸೂರು ಗ್ರಾಮದ ಅಡ್ಕಾರಿನ ಅಂಬಾಡಿಮೂಲೆ ಶ್ರೀ ವಿಷ್ಣುಮೂರ್ತಿ ಹಾಗೂ ಗುಳಿಗ ದೈವಸ್ಥಾನಕ್ಕೆ ಗ್ರೀನ್ ಹೀರೋ ಆಫ್ ಇಂಡಿಯಾ ಖ್ಯಾತಿಯ ಡಾ. ಆರ್.ಕೆ. ನಾಯರ್ ಅವರು ಮಾ.3ರಂದು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾ.21ರಿಂದ 23ರವರೆಗೆ ಜರುಗಲಿರುವ ದೈವಗಳ ಪ್ರತಿಷ್ಠೆ ಹಾಗೂ ಕೋಲದ ಆಮಂತ್ರಣ ಪತ್ರಿಕೆಯನ್ನು ದೈವಸ್ಥಾನದ ಅಧ್ಯಕ್ಷ ಅಶೋಕ ಅಡ್ಕಾರು ಅವರು ಡಾ. ಆರ್.ಕೆ. ನಾಯರ್ ಅವರಿಗೆ ಹಸ್ತಾಂತರಿಸಿದರು.

ದೈವಸ್ಥಾನದ ಕೆಲಸ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಾ. ಆರ್.ಕೆ. ನಾಯರ್ ಅವರು ದೈವಸ್ಥಾನದ ಅಭಿವೃದ್ಧಿಗೆ ಸಹಕರಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಗಣೇಶ್ ಅಂಬಾಡಿಮೂಲೆ ಅಡ್ಕಾರು, ನಿವೃತ್ತ ಎ.ಎಸ್.ಐ. ಭಾಸ್ಕರ ಅಡ್ಕಾರು, ಎ.ಆರ್. ಬಾಬು ಅಡ್ಕಾರು ಸೇರಿದಂತೆ ದೈವಸ್ಥಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು.