ಬಾಳಿಲ ಗ್ರಾಮ ಪಂಚಾಯತ್ ಗ್ರಾಮ ಸಭೆ

0

ಬಾಳಿಲ ಗ್ರಾಮ ಪಂಚಾಯತ್ 2023-24 ನೇ ಸಾಲಿನ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪಾವನ ಜೋಗಿಬೆಟ್ಟುರವರ ಅಧ್ಯಕ್ಷತೆಯಲ್ಲಿ ಮಾ.04 ರಂದು ಪಂಚಾಯತ್ ವಠಾಲದಲ್ಲಿ ನಡೆಯಿತು.

ಸುಳ್ಯ ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಶೈಲಜಾರವರು ನೋಡೆಲ್ ಅಧಿಕಾರಿಯಾಗಿದ್ದರು.

ಗ್ರಾಮ ಪಂಚಾಯತ್ ಪಿಡಿಒ ಹೂವಪ್ಪ ಗೌಡ ಸ್ವಾಗತಿಸಿ,ಕಾರ್ಯದರ್ಶಿ ಜಯಶೀಲ ರೈ ವರದಿ ಮಂಡಿಸಿದರು.

ಪಂಜಿಗಾರು ಜನತಾ ಕಾಲನಿ ರಸ್ತೆಯಲ್ಲಿ ಚರಂಡಿ ಮೋರಿ ರಚನೆ 19,924 ಎಂದಿದೆ ಅದು ಎಲ್ಲಿ ಮೋರಿ ಮಾಡಿದ್ದು ಎಂದು ಬಾಲಕೃಷ್ಣ ಮರಂಗಲ ಕೇಳಿದರು.
ಇದಕ್ಕೆ ಗ್ರಾ.ಪಂ.ಉಪಾಧ್ಯಕ್ಷ ರಮೇಶ್ ರೈ ಯವರು ಅದು ಬೀಡಿ ಬ್ರಾಂಚ್ ಸಮೀಪ ಮಳೆಗಾಲದಲ್ಲಿ ನೀರು ಬಂದು ರಸ್ತೆ ಬ್ಲಾಕ್ ಆಗುತ್ತಿತ್ತು.ಅದಕ್ಕೆ ಮೋರಿ ಅಳವಡಿಸಿದ್ದು ಎಂದು ಹೇಳಿದರು.ಆಗ ಬಾಲಕೃಷ್ಣರವರು ನೀವು ಒಂದು ಮನೆಗೆ ಹೋಗುವಲ್ಲಿ ಮೋರಿ ಹಾಕುತ್ತೀರಿ.ಬೇರೆ ಕಡೆ ರಸ್ತೆ ಸಂಪೂರ್ಣ ಕೆಟ್ಟು ಹೋಗಿದೆ ಅಲ್ಲಿ ರಸ್ತೆ ಅಭಿವೃದ್ಧಿ ಮಾಡಬಹುದಲ್ಲ ಎಂದು ಕೇಳಿದರು.
ಆಗ ಸದಸ್ಯರಾದ ಸರಸ್ವತಿ ಕಾಮತ್ ರವರು ಅಲ್ಲಿ ರಸ್ತೆಯಲ್ಲಿ ಮೇಲಿಂದ ನೀರು ಬಂದು ಕಸ ತುಂಬಿ ನೀರು ನಿಂತು ರಸ್ತೆಯಲ್ಲಿ ಹೋಗುವವರಿಗೆ ತೊಂದರೆಯಾಗುತ್ತಿತ್ತು ಆದುದರಿಂದ ಮೋರಿ ಅಳವಡಿಸಿದ್ದೇವೆ ಎಂದು ಹೇಳಿದರು.ಆಗ ಪರಸ್ಪರ ಚರ್ಚೆಗಳು ಜೋರಾದವು. ಸರಸ್ವತಿ ಕಾಮತ್ ರವರು ನೀವು ನಿಮ್ಮ ಮನೆಗೆ ಹೋಗುವ ದಾರಿಯ ಬಗ್ಗೆ ಮಾತಾಡಿ ಎಂದು ಹೇಳಿದರು.


ಆಗ ಬಾಲಕೃಷ್ಣರವರು ನೀವು ನನ್ನ ಮನೆಗೆ ಹೋಗುವ ಬಗ್ಗೆ ಮಾತಾಡಿ ಅಂತ ಹೇಳಿದ್ದು ಯಾಕೆ ? ನೀವು ಹಾಗೆ ಹೇಳಬಾರದು ಎಂದು ಹೇಳಿ ಸಭೆಯ ಎದುರು ಬಂದು ಧರಣಿ ಕುಳಿತರು.
ಆಗ ನೋಡೆಲ್ ಅಧಿಕಾರಿಯವರು ನೀವು ಚಯರಲ್ಲಿ ಕುಳಿತುಕೊಳ್ಳಿ ಮತ್ತೆ ಮಾತಾಡಿ ಎಂದು ಹೇಳಿದರು.ಇದಕ್ಕೆ ಒಪ್ಪದ ಬಾಲಕೃಷ್ಣರವರು ನಿನ್ನ ಮನೆಗೆ ಹೋಗುವ ವಿಚಾರ ಮಾತಾಡು ಅಂತ ಸರಸ್ವತಿ ಕಾಮತ್ ರವರು ಹೇಳಿದ್ದು ಯಾಕೆ ? ನಾನು ಗ್ರಾಮಸ್ಥ ಅಲ್ವ ನನಗೆ ಮಾತಾಡಬಹುದಲ್ವ ಎಂದು ಹೇಳಿದರು.ಆಗ ನೋಡೆಲ್ ಅಧಿಕಾರಿ ಅವರು ನೀವು ಮನೆಗೆ ಹೋಗುವ ದಾರಿಯ ಬಗ್ಗೆ ಹೇಳಿದ್ದು ಎಂದು ಹೇಳಿ ಸಮಾಧಾನ ಪಡಿಸಿದರು.ಆಗ ಬಾಲಕೃಷ್ಣರವರು ಇನ್ನು ಮುಂದೆ ಪಂಚಾಯತ್ ನಲ್ಲಿ ಇಂತಹ ವಿಚಾರಗಳು ಬರಬಾರದು ಎಂದು ಹೇಳಿ ನೆಲದಿಂದ ಎದ್ದು ಬಂದು ಚಯರಲ್ಲಿ ಕುಳಿತುಕೊಂಡರು.
ಬಳಿಕ ಗ್ರಾಮ ಸಭೆ ಮುಂದುವರಿಯಿತು.


ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ರೈ ಟಪ್ಪಾಲುಕಟ್ಟೆ ನಿರೂಪಿಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಮೇಶ್ ರೈ ಅಗಲ್ಪಾಡಿ ಮತ್ತು ಸದಸ್ಯರು ಹಾಗೂ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.