ಸಂಪಾಜೆ ಪವರ್ ಮ್ಯಾನ್ ಸಂಗಮೇಶರಿಗೆ ಜೆಸಿಐ ಸುಳ್ಯ ಪಯಸ್ವಿನಿ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರ

0

ಸಂಪಾಜೆ ಕಲ್ಲುಗುಂಡಿ‌ ಭಾಗದಲ್ಲಿ 8 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸುಳ್ಯ ಮೆಸ್ಕಾಂ ಉಪವಿಭಾಗದ ಅರಂತೋಡು ಶಾಖೆಯ ಪವರ್ ಮ್ಯಾನ್ ಸಂಗಮೇಶ್ ತಾಸಂಗಾವ ರಿಗೆ ಜೇಸಿಐ ಪಯಸ್ವಿನಿ ಸುಳ್ಯ ಇವರು‌ ಕೊಡಮಾಡುವ ಸೈಲೆಂಟ್ ಸ್ಟಾರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಭಾಂಗಣದಲ್ಲಿ ನೀಡಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಲಾಯಿತು. ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ್ ಕೊಯಿಂಗಾಜೆ ಸನ್ಮಾನವನ್ನು ನೆರವೇರಿಸಿದರು.

ಜೇಸಿ ಅಶೋಕ್ ಚೊಂತರ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸುಳ್ಯ ಪಯಸ್ವಿನಿ ಘಟಕಾಧ್ಯಕ್ಷ ಗುರುಪ್ರಸಾದ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ಸಂಪಾಜೆ ಗ್ರಾಮ ಪಂಚಾಯತ್ ಸಂಪಾಜೆ ಅಧ್ಯಕ್ಷೆ ಸುಮತಿ ಶಕ್ತಿವೇಲು , ನ್ಯೂಸ್ ನೋಟೌಟ್ ಪ್ರಧಾನ ಸಂಪಾದಕ ಹೇಮಂತ್ ಸಂಪಾಜೆ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಮಾಜಿ ಗ್ರಾ. ಪಂ.ಅಧ್ಯಕ್ಷ ಜಿ. ಕೆ ಹಮೀದ್, ಗ್ರಾ. ಪಂ ಉಪಾಧ್ಯಕ್ಷರಾದ. ಎಸ್.ಕೆ.ಹನೀಫ್, ಸಹಕಾರ ಸಂಘದ ಬ್ಯಾಂಕ್ ನ ನಿರ್ದೇಶಕ ಪಿ.ಎನ್.ಗಂಗಾಧರ, ಮಹವಿಷ್ನುಮೂರ್ತಿ ದೈವಸ್ಥಾನದ ಅಧ್ಯಕ್ಷ ಜಗದೀಶ್ ರೈ ಶುಭ ಹಾರೈಸಿದರು. ನಿಕಟಪೂರ್ವಅಧ್ಯಕ್ಷರಾದ ನವೀನ್ ಕುಮಾರ್.ಪ್ರಶಸ್ತಿ ಪತ್ರ ವಾಚಿಸಿದರು . ಪ್ರಕಾಶ್ ಪೀ. ಎಸ್ ವಂದಿಸಿದರು. ಶಶ್ಮಿ ಭಟ್ ಆಹ್ವಾನಿಸಿದರು . ಜೇಸಿ ರಂಜಿತ್ ಕುಕ್ಕೆಟ್ಟಿ, ಜೇಸಿ ಅಭಿಷೇಕ್ ಗುತ್ತಿಗಾರು, ಅಶ್ವಿನಿ ಚೆಂಬು, ನಂದರಾಜ್ ಸಂಕೇಶ್, ಪಂಚಾಯತ್ ಸಿಬ್ಬಂದಿಗಳು ನಾಗರಿಕರು ಉಪಸ್ಥಿತರಿದ್ದರು.