ಪಂಜ ಸಮೀಪ ಮತ್ತೊಂದು ಕಳ್ಳತನ ಯತ್ನ ಪ್ರಕರಣ ಬಯಲಿಗೆ

0

ಪಂಜ ಸಮೀಪದ ಪಂಬೆತ್ತಾಡಿ ಗ್ರಾಮದ ಡಬ್ಬಲ್ ಕಟ್ಟೆ ಎಂಬಲ್ಲಿಮನೆಗೆ ನುಗ್ಗಿ ಮಹಿಳೆಯ ಸರ ಎಳೆದ ಪರಾರಿಯಾದ ಪ್ರಕರಣ ಇಂದು ನಡೆದ ಘಟನೆಯ ಬೆನ್ನಿಗೇ ಕೂತ್ಕುಂಜ ಗ್ರಾಮದ ಕುಳ್ಳಾಜೆ ಎಂಬಲ್ಲಿ ಕಳ್ಳರು ಮನೆಯ ಬೀಗ ಮುರಿದು ಒಳಗೆ ನುಗ್ಗಿ ಮನೆಯಲ್ಲಿ ಜಾಲಾಡಿದ ಮತ್ತೊಂದು ಪ್ರಕರಣ ಸಂಜೆ ಬೆಳಕಿಗೆ ಬಂದಿದೆ.

ಕೂತ್ಕುಂಜದ ಗ್ರಾಮದ ಕುಳ್ಳಾಜೆ ರುಕ್ಮಿಣಿ ಎಂಬವರ ಮನೆಗೆ ಕಳ್ಳರು ನುಗ್ಗಿದ್ದಾರೆ.ಅವರು ಮನೆಯಲ್ಲಿ ಇಲ್ಲದಿದ್ದುದರಿಂದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸಂಜೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಪೋಲೀಸರು ಹಲವು ಕಡೆ ಸಿ ಸಿ ಕ್ಯಾಮೆರಗಳ ಪರಿಶೀಲನೆ ನಡೆಸಿದ್ದು ತನಿಖೆ ಚುರುಕು ಗೊಂಡಿದೆ.