ಅರಂಬೂರು ಮನೆತನದ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕ ತಂಬಿಲ ಸೇವೆ

0

ಆಲೆಟ್ಟಿಯ ಅರಂಬೂರು ಮನೆತನದ ಕುಕ್ಕೆತ್ತಿಬಲ್ಲು ರುದ್ರ ಚಾಮುಂಡಿ ಶ್ರೀ ವಿಷ್ಣುಮೂರ್ತಿ ಸಪರಿವಾರ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕ ತಂಬಿಲ‌ ಸೇವೆಯು ಮಾ.3 ರಂದು ಜರುಗಿತು. ಬೆಳಗ್ಗೆ ಗಣಪತಿ ಹವನ ನಡೆದು ಉಗ್ರಾಣ ತುಂಬಿಸಿದ ಬಳಿಕ ಶ್ರೀ ವೆಂಕಟರಮಣ ದೇವರ ಮುಡಿಪು ಪೂಜೆಯಾಗಿ ದೈವಗಳಿಗೆ ಅಗೇಲು ಸೇವೆ ನಡೆಯಿತು. ರಾತ್ರಿ ವಿಷ್ಣುಮೂರ್ತಿ ದೈವ ದ ದರ್ಶನ ಪಾತ್ರಿ ರಾಮ ಮಣಿಯಾಣಿ ಆಲೆಟ್ಟಿ ಯವರ ನೇತೃತ್ವದಲ್ಲಿ ದೈವದ ದರ್ಶನ ಸೇವೆಯಾಗಿ ಪ್ರಸಾದ ವಿತರಣೆಯಾಯಿತು. ಆಗಮಿಸಿದ ಎಲ್ಲರಿಗೂ ಅನ್ನ ಸಂತರ್ಪಣೆ ಯಾಯಿತು. ಕುಟುಂಬದ ಹಿರಿಯ ಕಿರಿಯ ಸದಸ್ಯರು ಉಪಸ್ಥಿತರಿದ್ದರು.