ಮೇನಾಲ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವಕ್ಕೆ ಚಾಲನೆ

0

ಸುಳ್ಯ ಮತ್ತು ಅಜ್ಜಾವರದಿಂದ ಹಸಿರುವಾಣಿ‌ ಮೆರವಣಿಗೆ : ಸಮರ್ಪಣೆ

ಅಜ್ಜಾವರದ ಮೇನಾಲದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವಕ್ಕೆ ಚಾಲನೆ ದೊರೆತಿದೆ. ಸುಳ್ಯ ಚೆನ್ನಕೇಶವ ದೇವಾಲಯ ಹಾಗೂ ಅಜ್ಜಾವರ ಮಹಿಷಾಮರ್ದಿನಿ ದೇವಸ್ಥಾನ ಆವರಣದಿಂದ ಏಕಕಾಲದಲ್ಲಿ ಹಸಿರುವಾಣಿ ಮೆರವಣಿ ನಡೆಯಿತು.

ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕರು ತೆಂಗಿನಕಾಯಿ ಒಡೆದು ಚಾಲನೆ ನೀಡಿದರೆ, ಅಜ್ಜಾವರ ದೇವಸ್ಥಾನದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಭಾಸ್ಕರ ರಾವ್ ಬಯಂಬು ತೆಂಗಿನಕಾಯಿ ಒಡೆದು ಮೆರವಣಿಗೆಗೆ ಚಾಲನೆ ನೀಡಿದರು.

ಎರಡೂ ಕಡೆಯಿಂದ ಆಗಮಿಸಿದ ಹಸಿರುವಾಣಿ ಮೆರವಣಿಗೆ ಮೇನಾಲ ಭಜನಾಮಂದಿರದಲ್ಲಿ ಸೇರಿ, ಅಲ್ಲಿಂದ ಎರಡೂ‌ ಕಡೆಯ ಮೆರವಣಿಗೆ ಜತೆಯಾಗಿ ಸಾಗಿ ಪೂರ್ಣಕುಂಭ ಸ್ವಾಗತದೊಂದಿಗೆ ದೈವಂಕಟ್ಟು ‌ಮಹೋತ್ಸವ ನಡೆಯುವ ಜಾಗಕ್ಕೆ ತಲುಪಿತು. ಅಲ್ಲಿ ಉಗ್ರಾಣ ತುಂಬುವ ಕಾರ್ಯಕ್ರಮ ‌ನಡೆಯಿತು.

ಈ ಸಂದರ್ಭದಲ್ಲಿ ಮಹೋತ್ಸವ ಸಮಿತಿ ಅಧ್ಯಕ್ಷ, ಮೇನಾಲ ಕುಟುಂಬದ ಯಜಮಾನರಾದ ಗುಡ್ಡಪ್ಪ ರೈ ಮೇನಾಲ ಸಹಿತ, ವಿವಿಧ ಸಮಿತಿಗಳ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಮೆರವಣಿಗೆಯಲ್ಲಿ ನಾಸಿಕ್ ಬ್ಯಾಂಡ್, ಕೇರಳ ಚೆಂಡೆ, ಗೊಂಬೆಗಳು, ಬಣ್ಣದ ಕೊಡೆಗಳು ಹೀಗೆ ವಿಶೇಷತೆಗಳು ಒಳಗೊಂಡಿದ್ದವು.