ಮಾ.8: ನಾಗಪಟ್ಟಣ ಸದಾಶಿವ ದೇವಳದಲ್ಲಿ ಮಹಾ ಶಿವರಾತ್ರಿ ಉತ್ಸವ

0

ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದಲ್ಲಿ ವರ್ಷಂಪ್ರತಿ ‌ಜರುಗುವ ಮಹಾ ಶಿವರಾತ್ರಿ ಉತ್ಸವವು
ಮಾ.8 ರಂದು ನಡೆಯಲಿರುವುದು.
ಪ್ರಾತ:ಕಾಲ ಅರ್ಚಕರಿಂದ ದೇವರಿಗೆ ನಿತ್ಯ ಪೂಜೆಯಾಗಿ ವಿಶೇಷವಾಗಿ ಶಿವರಾತ್ರಿ ಉತ್ಸವದ ಪ್ರಯುಕ್ತ ಏಕಾದಶ ರುದ್ರಾಭಿಷೇಕವು ನಡೆಯಲಿದೆ.
ಮಧ್ಯಾಹ್ನ ಮಹಾಪೂಜೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯು ನಡೆಯಲಿದೆ.

ಸಂಜೆ
ದೀಪಾರಾಧನೆಯಾಗಿ ಶ್ರೀ ಶಾಸ್ತಾವೇಶ್ವರ ಭಜನಾ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ರಾತ್ರಿ ಮಹಾಪೂಜೆಯಾಗಿ ಭಜನೆಯು ಮಹಾ ಮಂಗಳಾರತಿಯೊಂದಿಗೆ ಸಂಪನ್ನವಾಗಲಿರುವುದು‌ ಎಂದು ಸಮಿತಿ ಅಧ್ಯಕ್ಷ ದಿನೇಶ್ ಕೋಲ್ಚಾರು ತಿಳಿಸಿದರು.