ಮಾ.9-10: ಶಾಂತಿನಗರದಲ್ಲಿ ಮುತ್ತಪ್ಪ- ತಿರುವಪ್ಪ ದೈವಗಳ ನೇಮೋತ್ಸವ

0

ಸುಳ್ಯ ಕಸಬಾದ ಶಾಂತಿನಗರ ಶ್ರೀ ಮುತ್ತಪ್ಪ -ತಿರುವಪ್ಪ ದೈವರಾಧನಾ ಸೇವಾ ಸಮಿತಿ ಮತ್ತು ಮುತ್ತಪ್ಪ-ತಿರುವಪ್ಪ ಉತ್ಸವ ಸಮಿತಿ ಹಾಗೂ ಮಹಿಳಾ ಸಮಿತಿ ಇದರ ಜಂಟಿ ಆಶ್ರಯದಲ್ಲಿ
ಮಾ.9 ಮತ್ತು 10 ರಂದು ಶ್ರೀ ಮುತ್ತಪ್ಪ-ತಿರುವಪ್ಪ ದೈವಗಳ ಕಾಲಾವಧಿ ನೇಮೋತ್ಸವವು ನಡೆಯಲಿರುವುದು.

ಮಾ.9 ರಂದು ಬೆಳಗ್ಗೆ ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನವಾಗಿ ತಾಲೂಕಿನ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ ಆಕರ್ಷಕ ಕುಣಿತ ಭಜನೆಯು ಪ್ರದರ್ಶನವಾಗಲಿರುವುದು. ಬಳಿಕ ದೈವಸ್ಥಾನದಲ್ಲಿ ಪೈಂಗುತ್ತಿ ಹಾಗೂ ಮುತ್ತಪ್ಪ ದೈವದ ಮಲೆಯರ್ಕಲ್ ನಡೆದು ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನಂತರ ಮುತ್ತಪ್ಪ -ತಿರುವಪ್ಪ ದೈವರಾಧನಾ ಸೇವಾ ಸಮಿತಿ ಅಧ್ಯಕ್ಷ ಮಧುಸೂದನ್ ಪಿ.ಯಂ ರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆಯು ನಡೆಯಲಿದೆ. ಮುಖ್ಯ ಅಭ್ಯಾಗತರಾಗಿ ಮಾಜಿ ಸಚಿವ ಎಸ್.ಅಂಗಾರ ರವರುಉಪಸ್ಥಿತರಿರುವರು.ರಾತ್ರಿ ಗಂಟೆ 7.30 ರಿಂದ ಶ್ರೀ ಮುತ್ತಪ್ಪ ದೈವದ ನೇಮವಾಗಿ ಅನ್ನ ಸಂತರ್ಪಣೆಯಾಗಲಿರುವುದು.ಬಳಿಕಕಳಿಕಪಾಟ್, ಕಳಸ ಶೃಂಗಾರ ರುಮಾಲು ಕಟ್ಟುವುದು.


ಮರುದಿನ ಪ್ರಾತ:ಕಾಲ
ಶ್ರೀ ಮುತ್ತಪ್ಪ-ತಿರುವಪ್ಪ ದೈವಗಳ ನೇಮೋತ್ಸವ ನಡೆದು ಸಾರ್ವಜನಿಕ ಅನ್ನ ಸಂತರ್ಪಣೆ ಯಾಗಲಿರುವುದು.
ಮಾ.11 ರಂದು ಬೆಳಗ್ಗೆ ಹರಕೆಯ ಮುತ್ತಪ್ಪ ದೈವದ ನೇಮವು ನಡೆಯಲಿರುವುದಾಗಿ ಸಮಿತಿ ಅಧ್ಯಕ್ಷ ಮಧುಸೂದನ್ ಪಿ.ಯಂ. ರವರು ತಿಳಿಸಿದರು.