ಮಾ.8: ಆಲೆಟ್ಟಿ ಸದಾಶಿವ ದೇವಳದಲ್ಲಿ ಮಹಾ ಶಿವರಾತ್ರಿ ಉತ್ಸವ- ಏಕಾಹ ಭಜನೆ, ಆಕರ್ಷಕ ನೃತ್ಯ ಭಜನೆ

0

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ವರ್ಷಂಪ್ರತಿ ‌ಜರುಗುವ ಮಹಾ ಶಿವರಾತ್ರಿ ಉತ್ಸವ ಹಾಗೂ ಭಜನಾ ಸಂಘದ ಆಶ್ರಯದಲ್ಲಿ ನಡೆಯುವ ಏಕಾಹ ಭಜನೆಯು
ಮಾ.8 ರಂದು ನಡೆಯಲಿರುವುದು.
ಪ್ರಾತ:ಕಾಲ ಸೂರ್ಯೋದಯಕ್ಕೆ ಅರ್ಚಕರಿಂದ ದೀಪ ಸ್ಥಾಪನೆಯಾಗಿ
ಭಜನಾ ಸಂಕೀರ್ತನೆಯು ಆರಂಭವಾಗಲಿದೆ.
ಬಳಿಕ ದೇವರಿಗೆ ನಿತ್ಯ ಪೂಜೆಯಾಗಿ ವಿಶೇಷವಾಗಿ ಶಿವರಾತ್ರಿ ಉತ್ಸವದ ಪ್ರಯುಕ್ತ ಏಕಾದಶ ರುದ್ರಾಭಿಷೇಕವು ವೇದ ಪಾರಾಯಣದೊಂದಿಗೆ ನಡೆಯಲಿದೆ.
ಮಧ್ಯಾಹ್ನ ಮಹಾಪೂಜೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯು ನಡೆಯಲಿದೆ. ಸಂಜೆ ನಾರ್ಕೋಡು ದ್ವಾರದ ಬಳಿಯಿಂದ ಆಕರ್ಷಕ ಕುಣಿತ ಭಜನೆಯೊಂದಿಗೆ ಉಲುಪೆ ಮೆರವಣಿಗೆಯು ದೇವಳದ ತನಕ ಸಾಗಿ ಬರಲಿದೆ. ರಾತ್ರಿ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ನೃತ್ಯ ಭಜನೆ ಪ್ರದರ್ಶನ ವಾಗಲಿರುವುದು.
ರಾತ್ರಿ ವಿಶೇಷವಾಗಿ ರಂಗಪೂಜೆಯು ನಡೆದು ಪ್ರಸಾದವಿತರಣೆಯಾಗಲಿರುವುದು.ಮರುದಿನ ಸೂರ್ಯೋದಯದ ಸಮಯದಲ್ಲಿ ದೀಪ ವಿಸರ್ಜನೆಯಾಗಿ ಭಜನೆಯು ಮಹಾ ಮಂಗಳಾರತಿಯೊಂದಿಗೆ ಸಂಪನ್ನವಾಗಲಿರುವುದು‌.