ಅರಂಬೂರು ಬದರ್ ಜುಮ್ಮಾ ಮಸೀದಿಗೆ ವಕ್ಫ್ ಇಲಾಖೆಯಿಂದ 5 ಲಕ್ಷ ಮಂಜೂರು

0

ಅರಂಬೂರು ಬದರ್ ಜುಮ್ಮಾ ಮಸೀದಿಗೆ ಕರ್ನಾಟಕ ರಾಜ್ಯ ವಕ್ಫ್ ಇಲಾಖೆಯಿಂದ ಮಸೀದಿ ನವೀಕರಣ ಕಾಮಗಾರಿಗೆ ೫ ಲಕ್ಷ ರೂ ಮಂಜೂರಾಗಿದೆ . ಈ ಅನುದಾನವನ್ನು ತರಿಸುವಲ್ಲಿ ಕೆಪಿಸಿಸಿ ಸಂಯೋಜಕ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್ ಅರಂಬೂರು ಸಹಕರಿಸಿದ್ದಾರೆ. ಅನುದಾನ ಮಂಜೂರು ಮಾಡುವಲ್ಲಿ ಕರ್ನಾಟಕ ವಿಧಾನಸಭಾ ಅಧ್ಯಕ್ಷ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಸಚಿವ ಜಮೀರ್ ಅಹಮ್ಮದ್ ಖಾನ್‌ರವರು ಸಹಕರಿಸಿದ್ದಾರೆ ಎಂದು ಫಲಾನುಭವಿಗಳು ಪತ್ರಿಕಾ ಪ್ರಕಟನೆ ಮೂಲಕ ತಿಳಿಸಿದ್ದಾರೆ.