ಎಣ್ಮೂರಿನ ಬಾಡಿಗೆ ಮನೆಗೆ ಎನ್‌ಐಎ ಅಧಿಕಾರಿಗಳ ತಂಡ ದಾಳಿ

0

ಮನೆಯಾತನಿಗೆ ಸಮನ್ಸ್, ಮೊಬೈಲ್ ಫೋನ್ ವಶ

ಎಣ್ಮೂರಿನ ಬಾಡಿಗೆ ಮನೆಯೊಂದಕ್ಕೆ ಇಂದು ಬೆಳಿಗ್ಗೆ ದಾಳಿ ನಡೆಸಿದ್ದ ಎನ್‌ಐಎ ಅಧಿಕಾರಿಗಳ ತಂಡ ಮನೆಯಾತನಿಗೆ ಸಮನ್ಸ್ ನೀಡಿ ಆತನ ಮೊಬೈಲ್ ವಶಪಡಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

ಎಣ್ಮೂರು ಬಳಿಯ ಕಲ್ಲೇರಿ ನಿವಾಸಿ ಚಿದಾನಂದ ಎಂಬವರ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದ ಬಿಜು ಎಂಬಾತನ ಕೊಠಡಿಗೆ ಬೆಂಗಳೂರು ಬ್ರಾಂಚ್‌ ಎನ್‌ಐಎ ಅಧಿಕಾರಿಗಳು ಇಂದು ಬೆಳಿಗ್ಗೆ ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದ್ದಾರೆ.

2023 ರಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಸಂಬಂಧಿಸಿ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಚಿದಾನಂದರವರ ಬಾಡಿಗೆ ಮನೆಗೆ ಎರಡು ದಿನಗಳ ಹಿಂದೆ ಕೇರಳ ರಾಜ್ಯದ ಇಡುಕ್ಕಿಯ ಬಿಜು ಅಬ್ರಾಹಂ ಎಂಬಾತ ಬಂದಿದ್ದು, ಪರಿಸರದಲ್ಲಿ ಟ್ಯಾಪಿಂಗ್ ವೃತ್ತಿಗಾಗಿ ಬಂದ ಈತ ಈ ಮನೆಯಲ್ಲಿ ಬಾಡಿಗೆಗೆ ಇದ್ದ. ಈತನನ್ನು ವಿಚಾರಣೆ ನಡೆಸಿರುವ ಎನ್‌ಐಎ ತಂಡ ಈತ ಬಳಸುತ್ತಿದ್ದ ಮೊಬೈಲ್ ಫೋನ್ ಮತ್ತು ಅದರಲ್ಲಿದ್ದ ಜಿಯೋ ಕಂಪೆನಿಯ ಸಿಮ್ ಕಾರ್ಡ್ ವಶಪಡೆದು ಆತನಿಗೆ ಸಮನ್ಸ್ ನೀಡಿ ತೆರಳಿರುವುದಾಗಿ ತಿಳಿದು ಬಂದಿದೆ.