ಕಲ್ಲುಗುಂಡಿ: ದನ ಅಡ್ಡಬಂದು ಬೈಕ್ ಪಲ್ಟಿ ಸವಾರನಿಗೆ ಗಾಯ

0

ರಸ್ತೆಗೆ ದನ ಅಡ್ಡಲಾಗಿ ಬಂದ ಪರಿಣಾಮವಾಗಿ ಬೈಕ್ ಸವಾರ ನಿಯಂತ್ರಣ ತಪ್ಪಿ ಬಿದ್ದು , ಗಾಯಗೊಂಡ ಹಾಗೂ ಬೈಕಿಗೆ ರಿಕ್ಷಾ ಢಿಕ್ಕಿಯಾಗಿ ಜಖಂಗೊಂಡ ಘಟನೆ ದ.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ಮಾ.6ರಂದು ರಾತ್ರಿ ಸಂಭವಿಸಿದೆ.

ಸುಳ್ಯದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಬೈಕ್ ಗೆ ದನವೊಂದು ಅಡ್ಡಲಾಗಿ ಬಂದ ಪರಿಣಾಮವಾಗಿ ಬೈಕ್ ಸವಾರ‌ ನಿಯಂತ್ರಣ ತಪ್ಪಿ ಬಿದ್ದಿದ್ದು, ಈ ವೇಳೆ ರಸ್ತೆಯಲ್ಲಿ ಬಂದ ಅಟೋರಿಕ್ಷಾದ ಚಾಲಕ ಇದನ್ನು ಗಮನಿಸದೇ, ಬೈಕ್ ಗೆ ಢಿಕ್ಕಿ ಹೊಡೆದಿದ್ದು, ಅಟೋರಿಕ್ಷಾ ಮುಂಭಾಗ ಜಖಂಗೊಂಡಿರುವುದಾಗಿ ತಿಳಿದುಬಂದಿದೆ. ಬೈಕ್ ಸವಾರನ ಕೈ ಕಾಲುಗಳಿಗೆ ಗಾಯವಾಗಿರುವುದಾಗಿ ತಿಳಿದುಬಂದಿದೆ.