ಮೇನಾಲ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ

0

ಇಂದು ಕೋರಚ್ಚನ್, ಕಂಡನಾರ್ ಕೇಳನ್, ವಯನಾಟ್ ಕುಲವನ್ ಹಾಗೂ ವಿಷ್ಣುಮೂರ್ತಿ ದೈವದ ಉತ್ಸವ

ಅಜ್ಜಾವರ ಗ್ರಾಮದ ಮೇನಾಲದಲ್ಲಿ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಅಂಗವಾಗಿ ಇಂದು ಬೆಳಗ್ಗಿನಿಂದ ರಾತ್ರಿ ವರೆಗೆ ದೈವಗಳ ಉತ್ಸವ ನಡೆಯುವುದು.

ಬೆಳಗ್ಗೆ 9 ಗಂಟೆಯಿಂದ ಉತ್ಸವ ಆರಂಭಗೊಂಡರೆ ರಾತ್ರಿವರೆಗೆ ನಡೆಯುವುದು.

ಬೆಳಗ್ಗೆ ಕೋರಚ್ಚನ್ ದೈವ, ಬಳಿಕ ಕಂಡನಾರ್ ಕೇಳನ್ ದೈವ, ಅಪರಾಹ್ನ ವಯನಾಟ್ ಕುಲವನ್ ದೈವ ಬಳಿಕ ವಿಷ್ಣುಮೂರ್ತಿ ದೈವದ ಉತ್ಸವ ನಡೆಯುವುದು. ರಾತ್ರಿ ಮರಪಿಳರ್ಕಲ್, ಬಳಿಕ ಕೈವೀದ್ ನೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳುವುದು.

ಬೆಳಗ್ಗೆ ಯಿಂದ ರಾತ್ರಿ ತನಕ ನಿರಂತರ ಉಪಹಾರ ಹಾಗೂ ಅನ್ನಸಂತರ್ಪಣೆ ನಿರಂತರ ‌ನಡೆಯುವುದು.