ಪಂಜ: ಗ್ರಾ.ಪಂ. ಕುರಿತು ವಾಟ್ಸಾಪ್ ಗ್ರೂಪ್ ನಲ್ಲಿ ಅಪಪ್ರಚಾರ-ಪೋಲೀಸ್ ದೂರು

0

ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಇಲಾಖಾಧಿಕಾರಿಗಳ ಕುರಿತು ವಾಟ್ಸ್ ಪ್ ಗ್ರೂಪ್ ನಲ್ಲಿ ಮಾನಹಾನಿ ಹಾಗೂ ಅಪಪ್ರಚಾರ ನಡೆಸಿರುವ ವಿಚಾರದಲ್ಲಿ ಗ್ರಾಮ ಪಂಚಾಯತ್ ನವರು ಸುಬ್ರಹ್ಮಣ್ಯ ಪೋಲೀಸ್ ಠಾಣೆಗೆ ದೂರು ನೀಡಿರುವ ಘಟನೆ ನಡೆದಿದೆ.

ಪಂಜದ ಮಾಧವ ಎಂಬವರು ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷರ, ಸದಸ್ಯರ, ಅಭಿವೃದ್ಧಿ ಅಧಿಕಾರಿಯವರ ಹಾಗೂ ಪೋಲೀಸ್ ಇಲಾಖೆಯ ಸಿಬ್ಬಂದಿಗಳ ಕುರಿತು ಇಲ್ಲಸಲ್ಲದ ಮಾನಹಾನಿ ಹಾಗೂ ಅಪಪ್ರಚಾರ ವಾಯ್ಸ್ ರೆಕಾರ್ಡ್ ಸಾಮಾಜಿಕ (ವಾಟ್ಸ್ ಪ್ ಗ್ರೂಪ್)ಜಾಲತಾಣದಲ್ಲಿ ಶೇರ್ ಮಾಡಿರುವ ಕುರಿತು ದೂರಿನಲ್ಲಿ ತಿಳಿಸಲಾಗಿತ್ತು .ಈ ಬಗ್ಗೆ ಮಾ.7 ರಂದು ಮಾಧವ ರನ್ನು ಸುಬ್ರಹ್ಮಣ್ಯ ಪೋಲೀಸ್ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿದ್ದು ಪ್ರಕರಣ ಇತ್ಯರ್ಥ ಗೊಂಡಿದೆ.