ಅಡ್ಪಂಗಾಯ ಶಾಲಾ ನೂತನ ಕಟ್ಟಡ ಉದ್ಘಾಟನೆ

0

ಅಡ್ಪಂಗಾಯ ಶಾಲೆಯನ್ನು‌ ಕೆ.ಪಿ.ಎಸ್ ಶಾಲೆಯನ್ನಾಗಿ‌ ಮಾಡಿ : ಎಸ್.ಡಿ.ಎಂ.ಸಿ. ಅಧ್ಯಕ್ಷರಿಂದ ಸಚಿವರಿಗೆ ಮನವಿ

ಅಜ್ಜಾವರ ಗ್ರಾಮದ ಅಡ್ಪಂಗಾಯದಲ್ಲಿ ದ.ಕ.ಜಿಲ್ಲಾ ಪಂಚಾಯತ್ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ, ವಲಯ ಯೋಜನೆಯಡಿ 27 ಲಕ್ಷದ 80 ಸಾವಿರದಲ್ಲಿ ನಿರ್ಮಾಣವಾದ ನೂತನ ಕೊಠಡಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ಉದ್ಘಾಟಿಸಿದರು.

ಸಭೆಯ ಅಧ್ಯಕ್ಷತೆಯನ್ನು ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ವಹಿಸಿದ್ದರು.

ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಗ್ರಾ.ಪಂ ಅಧ್ಯಕ್ಷರಾದ ಬೇಬಿ ಕಲ್ಲಡ್ಕ, ಮಾಜಿ ಜಿ.ಪಂ.ಸದಸ್ಯ ಧನಂಜಯ ಅಡ್ಡಂಗಾಯ, ರಾಹುಲ್ ಅಡ್ವಂಗಾಯ, ಲೀಲಾ ಮನಮೋಹನ್‌, ಶಿಕ್ಷಣಾಧಿಕಾರಿಗಳಾದ ರಮೇಶ್ ಬಿ ಇ, ಕ್ಷೇತ್ರ ಸಮನ್ವಯಾಧಿಕಾರಿ ಶೀತಲ್, ಟಿ ಎಂ ಶಾಹಿದ್, ಸದಾನಂದ ಮಾವಜಿ, ಹಸೈನಾ‌ರ್ ಹಾಜಿ ಗೋರಡ್ಕ, ಶಾಲಾ ಮುಖ್ಯ ಶಿಕ್ಷಕಿ ಧನಲಕ್ಷ್ಮಿ, ಎಸ್.ಡಿ.ಎಂಸಿ ಅಧ್ಯಕ್ಷ ಅಶ್ರಫ್ ಸ ಅದಿ, ಅಬ್ಬಾಸ್ ಎ ಬಿ ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಚಿವರಿಗೆ ಮನವಿ‌: ಅಡ್ಪಂಗಾಯ ಶಾಲೆಯಲ್ಲಿ 132 ಮಕ್ಕಳಿದ್ದಾರೆ. ಆಂಗ್ಲಮಾಧ್ಯಮ ಶಾಲೆಗಳು ದೂರ ಇರುವುದರಿಂದ ಅಡ್ಪಂಗಾಯ ಶಾಲೆಗೆ ಕೆಪಿಎಸ್ ಶಾಲೆಯನ್ನಾಗಿ‌ ಮೇಲ್ದರ್ಜೆಗೇರಿಸಬೇಕು ಎಂದು ಎಸ್.ಡಿ.ಎಂ.ಸಿ. ಅಧ್ಯಕ್ಷ ಅಸ್ರಫ್ ಸಹದಿಯವರು‌ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು. ಅಲ್ಲದೆ ಅಕ್ಷರದಾಸೋಹಕ್ಕೆ ಸುಸಜ್ಜಿತ ಕೊಠಡಿ‌ ಹಾಗೂ ಹೆಚ್ಚುವರಿ ಕೊಠಡಿಯೊಂದನ್ನು ಒದಗಿಸುವಂತೆ ಅವರು‌ ಮನವಿ ಮಾಡಿದರು.

ಬಿಇಓ ರಮೇಶ್ ಬಿ ಇ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಧನಲಕ್ಷ್ಮಿ ಕುದ್ದಾಜೆ ವಂದಿಸಿದರು. ಸುರೇಖ ರೈ ಡಿ ಸಹ ಶಿಕ್ಷಕರು ಕಾರ್ಯಕ್ರಮ ನಿರೂಪಿಸಿದರು.