ಇಂದ್ರಾಜೆ ಸ.ಕಿ.ಪ್ರಾ. ಶಾಲೆಯಲ್ಲಿ ಪ್ಲೇ ಪಾರ್ಕ್ ಉದ್ಘಾಟನೆ

0

ಸರಕಾರಿ ಕಿರಿಯ ಪ್ರಾ.ಶಾಲೆ ಇಂದ್ರಾಜೆಲ್ಲಿ ಇತ್ತೀಚೆಗೆ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಉಳಿಕೆಯಾದ ಹಣದಲ್ಲಿ ನಿರ್ಮಿಸಲಾದ ಮಕ್ಕಳ ಪ್ಲೇ ಪಾರ್ಕ ನ್ನು ಮಾ. 10ರಂದುಗ್ರಾಮ ಪಂಚಾಯತ್ ಅಧ್ಯಕ್ಷೆ ಪಾವನ ಜೋಗಿಬೆಟ್ಟು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಂ. ಕೂಸಪ್ಪಗೌಡ ಮುಗುಪ್ಪು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶೇಖರ ಕೆ.ಪಿ, ಉಪಾಧ್ಯಕ್ಷ ತಾರಾನಾಥ ಕೆ, ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವರಾಮ ಕೊಳೆಂಜಿಕೋಡಿ ಮಾಜಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಆನಂದ ಗೌಡ ಕಾಯರ ಕಾಣಿಯೂರು ಸೇರಿದಂತೆ ಎಸ್. ಡಿ.ಎಂ.ಸಿ ಸದಸ್ಯರು, ಪೋಷಕರು ಹಿರಿಯ ವಿದ್ಯಾರ್ಥಿಗಳು ಶಾಲಾ ಶಿಕ್ಷಕರು ಅಕ್ಷರದಾಸೋಹ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.