ಕೇನ್ಯ -ನೇಲ್ಯಡ್ಕ : ಕಬಡ್ಡಿ ಪಂದ್ಯಾಟ ಸಮಾರೋಪ ಮತ್ತು ಸನ್ಮಾನ ಕಾರ್ಯಕ್ರಮ

0


ಕೇನ್ಯ ಗ್ರಾಮದ ನೇಲ್ಯಡ್ಕದಲ್ಲಿ ಈಗಲ್ ಅಟ್ಯಾಕರ್ಸ್ ನೇಲ್ಯಡ್ಕ ಇದರ ವತಿಯಿಂದ 2ನೇ ವರ್ಷದ 52 ಕೆ. ಜಿ. ವಿಭಾಗದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟದ ಸಮಾರೋಪ ನಡೆಯಿತು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಎಸ್. ಅಂಗಾರ ಮಾಜಿ ಸಚಿವ ಎಸ್ ಅಂಗಾರ ಭಾಗವಹಿಸಿ ಸಾಧಕರನ್ನು ಸನ್ಮಾನಿಸಿದರು.ಈಗಲ್ ಅಟ್ಯಾಕರ್ಸ್ ನ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷಿತ್ ಕಾರ್ಜ, ಪದ್ಮನಾಭ ರೈ ಆಗೋಲಿಬೈಲು ಗುತ್ತು, ಬಾಲಕೃಷ್ಣ ರೈ ಬಿರ್ಕಿ, ದೇವಿಪ್ರಸಾದ್ ರೈ ಗೆಜ್ಜೆ, ರಘುನಾಥ ರೈ ಕೆರೆಕ್ಕೋಡಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಸಮಾಜ ಸೇವಕರಾದ ವಿನೋದ್ ಬೊಳ್ಮಲೆ,ರಾಷ್ಟ್ರೀಯ ಕ್ರೀಡಾಪಟು ವನಿತಾ ಪಿ, ಅಂತಾರಾಷ್ಟ್ರೀಯ ಯೋಗ ಪಟು ಹಾರ್ದಿಕ ಕೆರೆಕ್ಕೋಡಿ, ನಿವೃತ್ತ ಯೋಧ ರವಿ ಕೊಠಾರಿ ಯವರ ಪರವಾಗಿ ಅವರ ತಮ್ಮ ದೇವರಾಜ್ ಕೊಠಾರಿ ಯವರನ್ನು ಸನ್ಮಾನಿಸಲಾಯಿತು.

52 ಕೆಜಿ ವಿಭಾಗದ ಕಬಡ್ಡಿ ಪಂದ್ಯಾಟ ದಲ್ಲಿ ನವಜ್ಯೋತಿ ನರಿಮೊಗರು ಪ್ರಥಮ ಸ್ಥಾನ, ಸ್ಕಂದ ವರಿಯರ್ಸ್ ಕಾಂಜಿ ದ್ವಿತೀಯ ಸ್ಥಾನ,ಸಪ್ತಶ್ರೀ ತೃತೀಯ ಸ್ಥಾನ, ಎಂ ಎಂ ಸಿ ಸುಬ್ರಮಣ್ಯ ಚತುರ್ಥ ಸ್ಥಾನ ಪಡೆಯಿತು.