ಎಣ್ಮೂರು ನೇಮೋತ್ಸವಕ್ಕೆ ಗೊನೆ ಮುಹೂರ್ತ

0

ಎಣ್ಮೂರು ಶ್ರೀ ಆದಿ ನಾಗ ಬ್ರಹ್ಮ ಕೋಟಿ ಚೆನ್ನಯ್ಯ ಗರಡಿಯ ನೇಮೋತ್ಸವದ ಅಂಗವಾಗಿ ಮಾ‌. 16ರಂದು ಗೊನೆ ಮುಹೂರ್ತ ನೆರವೇರಿತು.

ಅರ್ಚಕ ಪರಮೇಶ್ವರ ಭಟ್ ರವರ ನೇತೃತ್ವದಲ್ಲಿ ಗಣಪತಿ ಹವನ ನಡೆಯಿತು. ಪೂರ್ವ ಸಂಪ್ರದಾಯದಂತೆ ಗೊನೆ ಮುಹೂರ್ತದ ಬಳಿಕ ಬೈದೇರುಗಳ ತಂಬಿಲ ನಡೆದು, ದರ್ಶನ ನಡೆಯಿತು. ಕಂಚುಕಲ್ಲಿಗೆ ತೆಂಗಿನ ಕಾಯಿ ಒಡೆದು ಪ್ರಾರ್ಥಿಸಲಾಯಿತು.

ಇದೇ ಸಂದರ್ಭದಲ್ಲಿ‌ ಬೈದೇರುಗಳಿಗೆ ನೂತನ ಸುರ್ಯ ಸಮರ್ಪಿಸಲಾಯಿತು. ಹಳೆಯ ಸುರ್ಯದಿಂದ ನೂತನವಾಗಿ ನಿರ್ಮಿಸಿದ ಸುರ್ಯಕ್ಕೆ ಶಕ್ತಿಯನ್ನು ತುಂಬಿಸಲಾಯಿತು.

ಅನುವಂಶಿಕ ಆಡಳಿತದಾರ ಕಟ್ಟ ಬೀಡು ರಾಮಕೃಷ್ಣ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಗಂಧ ಪ್ರಸಾದ ನೀಡಲಾಯಿತು.

ಶ್ರೀಮತಿ ಪದ್ಮಾ ಆರ್. ಶೆಟ್ಟಿ ಮತ್ತು ಕಟ್ಟಬೀಡು ಕುಟುಂಬಸ್ಥರು, ಎನ್ .ಜಿ ಲೋಕನಾಥ ರೈ , ಪಂಜಿಮೊಗರು ರಘುನಾಥ ರೈ, ಭಕ್ತಾದಿಗಳು ಉಪಸ್ಥಿತರಿದ್ದರು. ಎಣ್ಮೂರು ಕಟ್ಟ ಬೀಡುವಿನಲ್ಲಿ ಉಳ್ಳಾಕ್ಲು ದೈವಗಳಿಗೆ ತಂಬಿಲ ನಡೆಯಿತು.

ಎಣ್ಮೂರು ಪ್ರೌಢಶಾಲಾ ಸ್ಕೌಟ್ ಗೈಡ್ಸ್ ಮುಖ್ಯಸ್ಥ ಲಿಂಗಪ್ಪ ಬೆಳ್ಳಾರೆಯವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ಕುಂಕುಮ , ಪ್ರಸಾದ ತಯಾರಿಕ ಹಾಗೂ ಸ್ವಚ್ಛತೆ ಕಾರ್ಯ ನಡೆಯಿತು.

ವರದಿ : ಎಎಸ್ಎಸ್