ಎಐಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಕೆ.ಎಂ. ಮುಸ್ತಫಾ

0

ಸುಳ್ಯ ಸಾಮಾಜಿಕ ರಾಜಕೀಯ ಧುರೀಣ ಹಾಜಿ ಕೆ.ಎಂ ಮುಸ್ತಫಾ ರವರನ್ನು ಎಐಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಎಐಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ರಾಜ್ಯಸಭಾ ಸದಸ್ಯರಾದ ಇಮ್ರಾನ್ ಪ್ರತಾಪ್ ಗಿರಿಯವರು ನೇಮಕ ಮಾಡಿರುತ್ತಾರೆ.
ಹಾಜಿ ಮುಸ್ತಫಾ ರವರು ಸುಳ್ಯ ಗಾಂಧಿನಗರ ಮುಹ್ಯದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷರಾಗಿ, ದಕ್ಷಿಣ ಕನ್ನಡ ಉಡುಪಿ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಇದರ ಉಪಾಧ್ಯಕ್ಷರಾಗಿದ್ದಾರೆ,ಸುಳ್ಯ ನಗರಪಂಚಾಯತ್ ಮಾಜಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.