ಕುಸಿದು ಬಿದ್ದು ವೃದ್ದ ಮೃತ್ಯು

0

ಸುಳ್ಯದ ಓಡಬಾಯಿ ಬಳಿ ನಡೆದ ಘಟನೆ

ಸುಳ್ಯ ಶಾಂತಿನಗರ ನಿವಾಸಿ ರಾಘವ ಎಂಬವರು ಸುಳ್ಯ ಓಡಬಾಯಿ ಟಿವಿಎಸ್ ಶೋರೂಂ ಬಳಿ ಕುಸಿದು ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ.
ಶಾಂತಿನಗರ ನಿವಾಸಿ ರಾಘವರವರು ಎರಡು ದಿನಗಳ ಹಿಂದೆ ಶಾಂತಿನಗರ ಮನೆಯಿಂದ ಸುಳ್ಯ ಪೇಟೆ ಕಡೆಗೆ ಬಂದಿದ್ದರು.
ಇಂದು ಮಧ್ಯಾಹ್ನ ಒಡಬಾಯಿ ಬಳಿ ಕುಸಿದು ಬಿದ್ದು ಮೃತಪಟ್ಟರೆನ್ನಲಾಗಿದೆ.
ಮೃತರಿಗೆ 65 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರಿ ಸುಶ್ಮಿತಾ ರನ್ನು ಅಗಲಿದ್ದಾರೆ.