ಮಾ.26 : ಸ್ವಯಂ ನಿವೃತ್ತಿ ಹೊಂದಲಿರುವ ಐವರ್ನಾಡು ಸಹಕಾರಿ ಸಂಘದ ಸಿ.ಇ.ಒ ರವಿಪ್ರಸಾದ್ ಸಿ.ಕೆ.ಯವರಿಗೆ ಸಾರ್ವಜನಿಕ ಬೀಳ್ಕೊಡುಗೆ

0

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಸಿ.ಕೆ.ಯವರು ಸ್ವಯಂ ನಿವೃತ್ತಿ ಹೊಂದಲಿದ್ದು ಅವರಿಗೆ ಸಾರ್ವಜನಿಕ ಬೀಳ್ಕೊಡುಗೆ ಕಾರ್ಯಕ್ರಮವು ಮಾ.26 ರಂದು ಬೆಳಿಗ್ಗೆ ಗಂಟೆ 10.00 ಕ್ಕೆ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಲಿದೆ.
ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರು ತಿಳಿಸಿದ್ದಾರೆ.