ಗೂನಡ್ಕ ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ ಆಲ್ ಇಂಡಿಯಾ ಆರ್ಟ್ ಮತ್ತು ಪರ್ಫಾರ್ಮೆನ್ಸ್ ಕಾಂಪಿಟೀಷನ್ ನಲ್ಲಿ ಚಿನ್ನ ಬೆಳ್ಳಿ ಮತ್ತು ಕಂಚಿನ ಪದಕಗಳು

0


ಗೂನಡ್ಕ ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು “ಅಖಿಲ ಭಾರತ ಕಲೆ ಮತ್ತು ಪ್ರದರ್ಶನ” ಸ್ಪರ್ಧೆ ರಂಗ್ -2023ರಲ್ಲಿ ಭಾಗವಹಿಸಿದ್ದು ಪ್ರಬಂಧ ಸ್ಪರ್ಧೆಯಲ್ಲಿ 7ನೇ ತರಗತಿಯ ಹಂಸಿನಿ .ಹೆಚ್. ಎಸ್ ಚಿನ್ನದ ಪದಕವನ್ನು ಪಡೆದಿದ್ದು, ಎಂಟನೇ ತರಗತಿಯ ತಿಶಾ ಖದೀಜ ಬೆಳ್ಳಿಯ ಪದಕವನ್ನು ಮತ್ತು ಏಳನೇ ತರಗತಿಯ ತನುಶ್ರೀ ಪಿ. ವಿ. ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಮೂರನೇ ತರಗತಿಯ ನಿಹಾಲ್ ಕೆ. ಎ. ಬೆಳ್ಳಿ ಪದಕವನ್ನು ಹಾಗೂ ನಾಲ್ಕನೇ ತರಗತಿಯ ಪ್ರಣವಿ ಪಿ.ವಿ ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.