ದೊಡ್ಡಿಹಿತ್ಲು ಕುಟುಂಬದ ತರವಾಡು ದೈವಸ್ಥಾನದಲ್ಲಿ ಶ್ರೀ ದೈವಗಳ ನಡಾವಳಿ

0

ಅಮರಮುಡ್ನೂರು ಗ್ರಾಮದ ದೊಡ್ಡಿಹಿತ್ಲು ಕುಟುಂಬದ ತರವಾಡು ದೈವಸ್ಥಾನದಲ್ಲಿ ಶ್ರೀ ಧರ್ಮದೈವ ರುದ್ರಚಾಮುಂಡಿ ಹಾಗೂ ಉಪ ದೈವಗಳ ನಡಾವಳಿಯು ಮಾ.24 ಮತ್ತು 25 ರಂದು ನಡೆಯಿತು.


ಸಂಜೆ ಶ್ರೀ ದೈವಗಳ ಭಂಡಾರ ಆಗಮಿಸಿ ರಾತ್ರಿ ಉಪದೈವಗಳಾದ ಕಲ್ಲುರ್ಟಿ, ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಸತ್ಯ ದ್ಯಾವತೆ ಹಾಗೂ ಗುಳಿಗ ದೈವಗಳ ನೇಮೋತ್ಸವ ನಡೆದು ಮರುದಿನ ಬೆಳಗ್ಗೆ ಶ್ರೀ ಧರ್ಮದೈವ ರುದ್ರ ಚಾಮುಂಡಿ ಮತ್ತು ಶ್ರೀ ಗುಳಿಗ ದೈವದ ನಡಾವಳಿಯಾಗಿ ಅರಸಿನ ಪ್ರಸಾದ ವಿತರಣೆಯಾಯಿತು. ನಡಾವಳಿಯಂದು ರಾತ್ರಿ ಮತ್ತು ಮಧ್ಯಾಹ್ನ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಸಾರ್ವಜನಿಕ
ಅನ್ನ ಪ್ರಸಾದ ವಿತರಣೆಯಾಯಿತು.


ಈ ಸಂದರ್ಭದಲ್ಲಿ ಕುಟುಂಬದ ಯಜಮಾನ ರು ಹಾಗೂ ಕುಟುಂಬದ ಹಿರಿಯ, ಕಿರಿಯ ಸದಸ್ಯರು ಸರ್ವರನ್ನೂ ಸ್ವಾಗತಿಸಿದರು.