ಮಾ.31 ರಂದು ಕೆ.ಎಫ್.ಡಿ.ಸಿ.ಉದ್ಯೋಗಿ ಜಗದೀಶ್ ಕುದ್ಕುಳಿ ನಿವೃತ್ತಿ

0

ಆಲೆಟ್ಟಿ ಗ್ರಾಮದ ಮೇದಿನಡ್ಕ ವಿಭಾಗದ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಉದ್ಯೋಗಿ ಜಗದೀಶ್ ಕುದ್ಕುಳಿ ಮಾ.31 ರಂದು ವೃತ್ತಿಯಿಂದ ನಿವೃತ್ತಿಯಾಗಲಿರುವರು.


ಕಳೆದ 36 ವರ್ಷಗಳಿಂದ ಕೆ.ಎಫ್.ಡಿ.ಸಿ ಯಲ್ಲಿ ಕ್ಯಾನ್ ಕ್ಲೀನರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು ಕಲ್ಲುಗುಂಡಿ ಮತ್ತು ಮೇದಿನಡ್ಕ ವಿಭಾಗದ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸಿದ್ದರು.


ಇವರು ಪ್ರಸ್ತುತ ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ಕುದ್ಕುಳಿ ಎಂಬಲ್ಲಿ ಪತ್ನಿ ಶ್ರೀಮತಿ ದಮಯಂತಿ ಹಾಗೂ ಇಬ್ಬರು ಪುತ್ರರಾದ ಕಿರಣ್ ಮತ್ತು ರೋಷನ್ ರೊಂದಿಗೆ ವಾಸವಾಗಿದ್ದಾರೆ.