ಬಳ್ಪ: ಅರ್ಗುಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಬ್ರಹ್ಮ ಕಲಶೋತ್ಸವ – ಧಾರ್ಮಿಕ ಸಭೆ

0

ನಾನು ನನ್ನಿಂದ ಎಂಬ ಯೋಚನೆ ಅವನತಿಗೆ ಕಾರಣ – ಚಿದಾನಂದ ಯು.ಎಸ್.

ನಾನು ನನ್ನಿಂದ ಎಂದು ಭಾವನೆ ಯಾವ ವ್ಯಕ್ತಿಯಲ್ಲಿರುತ್ತದೋ ಅದು ಆ ವ್ಯಕ್ತಿಯ ಅವನತಿಗೆ ಕಾರಣವಾಗುತ್ತದೆ. ನನ್ನಲ್ಲಿ ಏನಿದ್ದರೂ ಅದು ಭಗವಂತನಿಂದ ಕೊಡಲ್ಪಟ್ಟಿದೆ ಎಂದು ಭಾವಿಸಿದರೆ ನಾವು ಯಥಾಸ್ಥಿತಿಯಲ್ಲಿರುತ್ತೇವೆ. ನಮ್ಮನ್ನು ಭಗವಂತ ಸೃಷ್ಟಿಸಿರುವುದೇ ಸಾಧಿಸುವುದಕ್ಕಾಗಿ. ಅದಕ್ಕಾಗಿ ಭಗವಂತ ನಮಗೆ ಅನುಗ್ರಹಿಸುತ್ತಾನೆ ಎಂದು ನಿವೃತ್ತ ಅಧ್ಯಾಪಕ ಚಿದಾನಂದ ಯು.ಎಸ್. ಹೇಳಿದರು.

ಅವರು ಮಾ. 30ರಿಂದ ಎ. 4ರ ತನಕ ನಡೆಯುತ್ತಿರುವ ಬಳ್ಪ ಗ್ರಾಮದ ಅರ್ಗುಡಿ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಅಂಗವಾಗಿ ಎ. 1ರಂದು ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಸದಾನಂದ ಕಾರ್ಜರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸತ್ಯನಾರಾಯಣ ಭಟ್ ಕಾಯಂಬಾಡಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬಳ್ಪ ಗ್ರಾ.ಪಂ. ಅಧ್ಯಕ್ಷ ಹರ್ಷಿತ್ ಕಾರ್ಜ, ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನೇಮಿರಾಜ್ ಪಲ್ಲೋಡಿ, ಪ್ರಗತಿಪರ ಕೃಷಿಕ ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ, ಬಳ್ಪ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಾರಾಯಣ ಬಿ ಭಾಗವಹಿಸಿದ್ದರು. ಉಪ್ಪಳ ನಡುಮನೆಗುತ್ತು ಲಿಂಗಪ್ಪ ರೈ ಅರ್ಗುಡಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಕೇನ್ಯ ರವೀಂದ್ರನಾಥ ಶೆಟ್ಟಿ, ನಿವೃತ್ತ ತಹಶಿಲ್ದಾರ್ ತಮ್ಮಯ್ಯ ಗೌಡ ಗೆಜ್ಜೆ, ಪಂಜ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಶ್ರೀಕೃಷ್ಣ ಭಟ್ ಪಟೋಳಿ, ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಸ್ಥಾಪಕಾಧ್ಯಕ್ಷ ವಿಶ್ವನಾಥ ರೈ ಅರ್ಗುಡಿ, ನಿವೃತ್ತ ವಲಯರಣ್ಯಾಧಿಕಾರಿ ಸುರೇಶ್ ಕಾರ್ಜ ಪುತ್ತೂರು, ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದ ಧಾರ್ಮಿಕ ಉತ್ಸವ ಸಮಿತಿ ಗೌರವಾಧ್ಯಕ್ಷ ಭಾಸ್ಕರ ಗೌಡ ಪಂಡಿ, ಕೇನ್ಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷೆ ಶ್ರೀಮತಿ ಮಮತಾ ಸುದರ್ಶನ ಶೆಟ್ಟಿ ಗೌರವ ಉಪಸ್ಥಿತರಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಭಿವೃದ್ಧಿ ಸಮಿತಿ ಸದಸ್ಯರಾದ ಶಿವಣ್ಣ ಗೌಡ ಕಲುಂಗುಡಿ, ಕೇಶವ ಗೌಡ ಕಾರ್ಜ, ಮಂಜುನಾಥ ಗೌಡ ಕಟ್ಟ, ರಾಧಾಕೃಷ್ಣ ರೈ ಅರ್ಗುಡಿ, ಲಿಂಗಪ್ಪ ಅಜಿಲ ಸಂಪ್ಯಾಡಿ, ಶ್ರೀಮತಿ ಬೇಬಿ ಭಾಸ್ಕರ ಕಟ್ಟ, ಶ್ರೀಮತಿ ನಾಗವೇಣಿ ಅರ್ಗುಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉದ್ಯಮಿ ಸದಾನಂದ ರೈ ಅರ್ಗುಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬ್ರಹ್ಮ ಕಲಶೋತ್ಸವ ಸಮಿತಿ ಸಂಘಟನಾ ಕಾರ್ಯದರ್ಶಿ ಅಡ್ಯಾರ್ ಗುತ್ತುಅರುಣ್ ಕುಮಾರ್ ರೈ ಗೆಜ್ಜೆ ಸ್ವಾಗತಿಸಿ, ಕೋಶಾಧಿಕಾರಿ ಬೆಳ್ಯಪ್ಪ ನಾದೂರು
ವಂದಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಬ್ರಹ್ಮ ಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಕಟ್ಟ ವರದಿ ವಾಚಿಸಿದರು. ಮಹೇಶ್ ಸೂಂತಾರು ಧಾರ್ಮಿಕ ಉಪನ್ಯಾಸಕರನ್ನು ಪರಿಚಯಿಸಿದರು. ಮುರುಳ್ಯ ಗ್ರಾ.ಪಂ. ಕಾರ್ಯದರ್ಶಿ ಸೀತಾರಾಮ ಸಂಪ್ಯಾಡಿ ಮತ್ತು ಮಹೇಶ್ ಸೂಂತಾರು ಕಾರ್ಯಕ್ರಮ ನಿರೂಪಿಸಿದರು. ಕು. ತುಷಾನಿ ಮತ್ತು ಕು. ತೃಶಾನಿ ಪ್ರಾರ್ಥಿಸಿದರು.