ಫೋನ್ ನಲ್ಲಿ ಜೀವ ಬೆದರಿಕೆ : ಸುಳ್ಯ ಪೋಲೀಸ್ ಠಾಣೆಗೆ ಪ್ರವೀಣ್ ನಾಯಕ್ ದೂರು

0

ವಾಟ್ಸಾಪ್ ಗ್ರೂಪ್ ವಿಚಾರಕ್ಕೆ ಫೋನ್ ನಲ್ಲಿ ಜೀವ ಬೆದರಿಕೆ ಒಡ್ಡಿದ್ದಾರೆಂದು ಪ್ರವೀಣ್ ನಾಯಕ್ ಅಂಗಡಿಮಠರವರು ಸುಳ್ಯ ಪೋಲೀಸ್ ಠಾಣೆಗೆ ದೂರು‌ ನೀಡಿರುವುದಾಗಿ ತಿಳಿದುಬಂದಿದೆ.

ವಿಕಲಾಂಗ ಚೇತನರ ಸಂಘದ ರಾಜ್ಯ ನಾಯಕರಾಗಿರುವ ಪ್ರವೀಣ್ ನಾಯಕ್ ರವರು ವಾಟ್ಸಾಪ್ ಗ್ರೂಪೊಂದರ ಅಡ್ಮಿನ್ ಆಗಿದ್ದು, ಈ ಗ್ರೂಪ್ ನಲ್ಲಿರುವ ಸದಸ್ಯ ರೊಬ್ಬರನ್ನು ಡಿಲೀಟ್ ಮಾಡುವಂತೆ ಹೊಸನಗರದ ಶ್ರೀಕಾಂತ್ ಗುಲ್ವಾಡಿ ಎಂಬವರು ತಿಳಿಸಿದ್ದರಲ್ಲದೆ, ಪ್ರವೀಣ್ ನಾಯಕರು ಕಾರಣ ಕೇಳಿದಾಗ ಅವರು ವಾಟ್ಸಾಪ್ ನಲ್ಲಿ ಅವಾಚ್ಯವಾಗಿ ನಿಂದಿಸಿದ್ದಾರಲ್ಲದೆ, ಫೋನ್ ಕರೆಯಲ್ಲಿ ಜೀವ ಬೆದರಿಕೆ ಒಡ್ಡಿದ್ದರೆನ್ನಲಾಗಿದೆ. ಈ ಕುರಿತು ಪ್ರವೀಣ್ ನಾಯಕ್ ರು ಸುಳ್ಯ ಪೋಲೀಸ್ ಠಾಣೆಗೆ ತೆರಳಿ, ವಾಟ್ಸಾಪ್ ಹಾಗೂ ದೂರವಾಣಿ ಕರೆಗಳ ವಿವರ ನೀಡಿ, ಶ್ರೀಕಾಂತ್ ಮೇಲೆ ದೂರು ನೀಡಿರುವುದಾಗಿ ತಿಳಿದುಬಂದಿದೆ.