ಜೋಡುಪಾಲ ಬಳಿ ಖಾಸಗಿ ಬಸ್ ಪಲ್ಟಿ – ರೋಡ್ ಬ್ಲಾಕ್

0

ಬೆಂಗಳೂರಿನಿಂದ ಸುಳ್ಯಕ್ಕೆ ಬರುತ್ತಿದ್ದ ಗೌರಿಶಂಕರ ಎಂಬ ಖಾಸಗಿ ಬಸ್ ವಿದ್ಯುತ್ ಕಂಬವೊಂದಕ್ಕೆ ಡಿಕ್ಕಿ ಹೊಡೆದು ರಸ್ತೆಗೆ ಅಡ್ಡಲಾಗಿ ಪಲ್ಟಿಯಾಗಿ ರಸ್ತೆ ಬ್ಲಾಕ್ ಆದ ಘಟನೆ ಇದೀಗ ಮಡಿಕೇರಿ ಸಮೀಪದ ಜೋಡುಪಾಲದಿಂದ ವರದಿಯಾಗಿದೆ.

ಬೆಳಿಗ್ಗೆ ಸುಮಾರು 5:30ಕ್ಕೆ ಘಟನೆ ಸಂಭವಿಸಿದ್ದು, ಸುಳ್ಯದಿಂದ ಮಡಿಕೇರಿ ಕಡೆ ಹೋಗುವ ಪ್ರಯಾಣಿಕರು ಹಾಗೂ ಮಡಿಕೇರಿಯಿಂದ ಸುಳ್ಯ ಕಡೆಗೆ ಬರುವ ಪ್ರಯಾಣಿಕರು ರಸ್ತೆ ಬ್ಲಾಕ್ ನಿಂದ ತೊಂದರೆ ಅನುಭವಿಸುತ್ತಿದ್ದಾರೆ.

ಸ್ಥಳಕ್ಕೆ ಮಡಿಕೇರಿ ಪೊಲೀಸ್ ಠಾಣಾ ಸಿಬ್ಬಂದಿಗಳು ಇದೀಗ ಆಗಮಿಸಿದ್ದಾರೆ.