ಯೇನೆಕಲ್ಲು : ಬೇಸಿಗೆ ಶಿಬಿರ

0


ಸ.ಹಿ.ಪ್ರಾ. ಶಾಲೆ ಯೇನೆಕಲ್ಲು ಇಲ್ಲಿ ಎ.4ರಿಂದ ಎ.6ರವರೆಗೆ “ಬೇಸಿಗೆ ಶಿಬಿರ”ವನ್ನು ನಡೆಸಲಾಯಿತು. ಶಿಬಿರವನ್ನು ದೀಪ ಬೆಳಗಿಸುವುದರ ಮೂಲಕ ನಿವೃತ್ತ ಮುಖ್ಯಗುರುಗಳಾದ ಮುತ್ತಪ್ಪ ಬೂದಿಪಳ್ಳ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ “ವ್ಯಕ್ತಿತ್ವ ವಿಕಸನ” ಕಾರ್ಯಗಾರವನ್ನು ಜೆಸಿಐ ಪದಾಧಿಕಾರಿ ಸೋಮಶೇಖರ ನೇರಳ, ಭಜನಾ ಕಮ್ಮಟವನ್ನು ಸಚಿನ್ ಕೆ. ಬಿ, ಪೇಪರ್ ಕ್ರಾಫ್ಟ್ ನ್ನು ಗೋಪಾಲಕೃಷ್ಣ ಪ್ರೌಢಶಾಲೆ ಬಿಳಿನೆಲೆ ಇಲ್ಲಿನ ಚಿತ್ರಕಲಾ ಅಧ್ಯಾಪಕರಾದ ದಿನೇಶ್ ಕುಂದರ್, ಚಿತ್ರಕಲೆ, ಹಾಡು, ಜಾದು ವಿಷಯದ ಬಗ್ಗೆ ಕಲಾವಿದ ಮಾಯಿಲಪ್ಪ ಮಂಡೆಕೋಲು, ಜೇನು ಕೃಷಿ ಹಾಗೂ ಕಸಿ ಕಟ್ಟುವುದರ ಬಗ್ಗೆ ಸ್ಥಳೀಯ ಸಂಪನ್ಮೂಲ ವ್ಯಕ್ತಿ ಜಗದೀಶ ಪರಮಲೆ, ನಾಟಿ ವೈದ್ಯ (ಪ್ರಥಮ ಚಿಕಿತ್ಸೆ)ದ ಬಗ್ಗೆ ನಾಗೇಶ್ ನೆಕ್ರಾಜೆ ಮಾಹಿತಿ ಮತ್ತು ತರಬೇತಿ ನೀಡಿದರು. ಎಸ್ .ಡಿ .ಎಂ. ಸಿ ಅಧ್ಯಕ್ಷ ಅಶೋಕ್ ಕುಮಾರ್ ಅಂಬೆಕಲ್ಲು ಇವರ ಅಧ್ಯಕ್ಷತೆಯಲ್ಲಿ ನಾಗೇಶ್ ರವರ ಉಪಸ್ಥಿತಿಯಲ್ಲಿ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಚಂದ್ರಿಕಾ ಬಿ.ಸಿ, ಅಧ್ಯಾಪಕ ವೃಂದ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಮಾದನ ಮನೆ, ಯೇನೆಕಲ್ಲಿನ ಹಾಲು ಒಕ್ಕೂಟ ಅಧ್ಯಕ್ಷ ಭರತ್ ನೆಕ್ರಾಜೆ, ಎಸ್‌.ಡಿ.ಎಂ.ಸಿ ಸದಸ್ಯರು, ಪೋಷಕ ವೃಂದದವರು ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ಶಿಬಿರದ ಕುರಿತಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.