ಪಂಜ : ಲಯನ್ಸ್ ಕ್ಲಬ್ ವತಿಯಿಂದ ಮನೆ ನಿರ್ಮಾಣಕ್ಕೆ ಧನ ಸಹಾಯ ಮತ್ತು ಪರಿಕರಗಳ ಹಸ್ತಾಂತರ ಕಾರ್ಯಕ್ರಮ

0

ಪಂಜ ಲಯನ್ಸ್ ಕ್ಲಬ್ ವತಿಯಿಂದ ಪಂಬೆತ್ತಾಡಿ ಗ್ರಾಮದ ಕೋಟೆಗುಡ್ಡೆ ನಿವಾಸಿ ಬಡ ಮಹಿಳೆ ಪುಷ್ಪಾವತಿ ಎಂಬವರಿಗೆ ಮನೆ ನಿರ್ಮಾಣಕ್ಕೆ ಧನ ಸಹಾಯ ಹಾಗೂ ಪರಿಕರಗಳನ್ನು ಎ.13 ರಂದು ಹಸ್ತಂತರಿಸಲಾಯಿತು.


ಈ ಸಂದರ್ಭ ಲಯನ್ಸ್ ಕ್ಲಬ್ ಅಧ್ಯಕ್ಷ ಲ.ದಿಲೀಪ್ ಬಾಬ್ಲು ಬೆಟ್ಟು ಮಾತನಾಡುತ್ತಾ ಸಹಾಯಧನ ಹಾಗೂ ಪರಿಕರಗಳನ್ನು ನೀಡಲು ಸಹಕರಿಸಿದ ಲಯನ್ಸ್ ಕ್ಲಬ್ ನ ಸದಸ್ಯರನ್ನು ಅಭಿನಂದಿಸಿದರು.

ವಲಯ 1ರ ವಲಯಾಧ್ಯಕ್ಷ ಲ.ಸಂತೋಷ್ ಜಾಕೆ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿ ಕ್ಲಬ್ ನ ಕಾರ್ಯ ವೈಖರಿ ಮತ್ತು ನಿರಂತರ ಸೇವಾ ಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಲಯನ್ಸ್ ಪೂರ್ವಾಧ್ಯಕ್ಷರುಗಳಾದ ಲ .ಜಾಕೆ ಮಾಧವ ಗೌಡ, ಸುರೇಶ್ ನಡ್ಕ , ಲ .ತುಕಾರಾಂ ಯೇನೆಕಲ್ಲು, ನಿಕಟ ಪೂರ್ವಾಧ್ಯಕ್ಷ ಪುರುಷೋತ್ತಮ ದಂಬೆಕೋಡಿ, ಪಂಬೆತ್ತಾಡಿ ಚಿಗುರು ತಂಡದ ಅಧ್ಯಕ್ಷ ಶ್ರೀನಿವಾಸ್ ಬಿ. ಹಾಗೂ ಸದಸ್ಯರಾದ ಲ.ಕೇಶವ ಕುದ್ವ, ಲ.ನಾಗೇಶ್ ಕಿನ್ನಿಕುಮೇರಿ, ಕಾರ್ಯದರ್ಶಿ ಲ. ವಾಸುದೇವ ಮೇಲ್ಪಾಡಿ, ಕೋಶಾಧಿಕಾರಿ ಲ ಆನಂದ ಗೌಡ, ಪಲಾನುಭವಿ ಪುಷ್ಪಾವತಿ ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.