ಮತದಾರರದ ಪಟ್ಟಿಯಿಂದ 9ಕ್ಕೂ ಅಧಿಕ ಮಂದಿಯ ಹೆಸರು ಡಿಲೀಟ್

0

ಸುಳ್ಯ ನಗರದ ಕಲ್ಲುಮುಟ್ಲು ಪರಿಸರದಲ್ಲಿ ವಾಸವಿರುವ ಸುಮಾರು 9ಕ್ಕೂ ಹೆಚ್ಚು ಮಂದಿ ಮತದಾರರು ಭಾಗ ಸಂಖ್ಯೆ 182ರ ಪಟ್ಟಿಯಿಂದ ಡಿಲೀಟ್‌ಗೊಂಡಿದ್ದು ವಿಷಯ ತಿಳಿದ ಸ್ಥಳೀಯ ನಿವಾಸಿಗಳು ಅಂಗನವಾಡಿ ಕೇಂದ್ರದ ಬಳಿ ಜಮಾಯಿಸಿ ಸ್ಥಳೀಯ ಬಿಎಲ್‌ಒ ಅಂಗನವಾಡಿ ಶಿಕ್ಷಕಿಯನ್ನು ಕರೆಸಿ ವಿಚಾರಿಸಿ ಆಕ್ರೋಶ ವ್ಯಕ್ತ ಪಡಿಸಿದ ಘಟನೆ ಎ.19ರಂದು ನಡೆದಿದೆ.

ಭಾಗ ಸಂಖ್ಯೆ 182ರಲ್ಲಿ ಕ್ರಮ ಸಂಖ್ಯೆ 631 ಮಹಮ್ಮದ್ ಬಶೀರ್ 629 ಝೀನತ್, 284 ಝೂಲೈಕ, 285 ತೌಫಿಕ್, 606 ಮರಿಯಮ್ಮ, 707 ಮಿಸ್ರಿಯಾ, 827 ರಿನಾಸ್, 828 ನಿಯಾಜ್, 815 ಸಫಿಯಾ, ಝಾಹಿದ್ 867, ಈ ಕ್ರಮ ಸಂಖ್ಯೆಗಳು ಮತದಾರರ ಪಟ್ಟಿಯಿಂದ ಡಿಲೀಟ್ ಗೊಂಡಿದ್ದು ಈ ಎಲ್ಲಾ ಮತದಾರರು ಪ್ರಸ್ತುತ ಕಲ್ಲುಮುಟ್ಲು ಪರಿಸರದಲ್ಲಿ ವಾಸಿಸುತ್ತಿದ್ಸು ಇವರ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್‌ಗೊಂಡಿರುವುದು ತಿಳಿದ ಸ್ಥಳೀಯ ಕಾಂಗ್ರೆಸ್ ಬೂತ್ ಸಮಿತಿ ಅಧ್ಯಕ್ಷ ಅಶ್ರಫ್ ರವರು ಈ ವಿಷಯವನ್ನು ಪಕ್ಷದ ಮುಖಂಡರ ಗಮನಕ್ಕೆ ತಂದಿದ್ದಾರೆ. ಈ ವೇಳೆ ಸ್ಥಳೀಯ ಸುಮಾರು ೧೫ಕ್ಕೂ ಹೆಚ್ಚು ನಿವಾಸಿಗಳು ಅಂಗನವಾಡಿಯ ಬಳಿ ಜಮಾಯಿಸಿ ಆಕ್ರೋಶ ವ್ಯಕ್ತ ಪಡಿಸಿದರು.

ಈ ಬಗ್ಗೆ ಮತದಾರರ ಪಟ್ಟಿಯಿಂದ ಡಿಲೀಟ್‌ಗೊಂಡಿರುವ ಮೊಹಮ್ಮದ್ ಬಶೀರ್ ಹಾಗೂ ಅವರ ಪತ್ನಿ ಝೀನತ್ ಸುದ್ದಿ ವರದಿಗಾರರೊಂದಿಗೆ ಮಾತನಾಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಮತಚಲಾವಣೆ ಮಾಡಿದ್ದು ಸ್ಥಳೀಯ ಅಂಗನವಾಡಿ ಶಿಕ್ಷಕಿಗೆ ನಾವು ಇರುವ ಬಗ್ಗೆ ಖಚಿತವಾದ ಮಾಹಿತಿ ಇದ್ದರು ಕೂಡ ಬೇರೆಯವರ ಮಾತನ್ನು ಕೇಳಿ ಈ ರೀತಿ ಮಾಡಿದ್ದಾರೆ.

ಈ ವಿಷಯವನ್ನು ತಹಶೀಲ್ದಾರರ ಗಮನಕ್ಕೆ ನೀಡಿವೆ. ಆದರೂ ಸರಿಪಡಿಸುವ ದಿನಾಂಕ ಕಳೆದ ತಿಂಗಳು 25ನೇಯ ದಿನಾಂಕದ ವರೆಗೆ ಇದ್ದು ಇದೀಗ ಈ ಬಾರಿಯ ಚುನಾವಣೆಯಲ್ಲಿ ಮತದಾನ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿದು ತುಂಬಾ ನೋವಾಗಿದೆ. ಯಾರೋ ಮಾಡಿರುವ ತಪ್ಪಿಗೆ ನಮ್ಮ ಹಕ್ಕನ್ನು ಚಲಾಯಿಸಲು ಆಗದ ಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ನೋವನ್ನು ತೋಡಿಕೊಂಡರು.

ವಿಷಯ ತಿಳಿದು ಸ್ಥಳಕ್ಕೆ ಬಂದ ಸುಳ್ಯ ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ ಅಂಗನವಾಡಿ ಶಿಕ್ಷಕಿಯ ಬೇಜವಾಬ್ದಾರಿ ತನದಿಂದ ಈ ರೀತಿಯ ಘಟನೆ ನಡೆದಿದ್ದು ಸಂಬಂಧಪಟ್ಟ ಅಧಿಕಾರಿಗಳು ಮತದಾರರ ಪಟ್ಟಿಯಿಂದ ಡಿಲೀಟ್‌ಗೊಂಡಿರುವ ಮತದಾರರರಿಗೆ ಮತ ಚಲಾಯಿಸುವ ವ್ಯವಸ್ಥೆಯನ್ನು ಮಾಡಿಕೊಡಲೇಬೇಕೆಂದು ಆಗ್ರಹಿಸಿದರು.


ಈ ಬಗ್ಗೆ ಮಾತನಾಡಿದ ಅಂಗನವಾಡಿ ಶಿಕ್ಷಕಿ ಮಹಮ್ಮದ್ ಬಶೀರ್ ಮತ್ತು ಝೀನತ್ ಹೆಸರಿನವರು ಬೇರೆ ಕಡೆ ಹೋಗಿದ್ದು ಅವರೇ ಎಂದು ತಿಳಿದು ಇವರನ್ನು ಮತದಾರರ ಪಟ್ಟಿಯಿಂದ ತಪ್ಪಾಗಿ ಡಿಲೀಟ್‌ಗೊಳಿಸಲಾಗಿತ್ತು. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿನೆ. ಉಳಿದವರ ಬಗ್ಗೆ ನನ್ನ ಗಮನಕ್ಕೆ ಬಂದಿರಲಿಲ್ಲ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ನೀಡಿ ಸೇರ್ಪಡೆಗೊಳಿಸಲು ಸಾಧ್ಯವಾಗುದಾದರೆ ಪ್ರಯತ್ನಿಸುವುದಾಗಿ ತಿಳಿಸಿದರು.