ಕಲ್ಮಡ್ಕ:ಸಿಡಿಲು ಬಡಿತಕ್ಕೆ ಕರು ಬಲಿ-ಹೊತ್ತಿ ಹೋದ ವಯರಿಂಗ್

0

ಸಿಡಿಲಿನ ಬಡಿತಕ್ಕೆ ಕರು ವೊಂದು ಬಲಿಯಾಗಿದ್ದು ಮತ್ತು ಮನೆಯ
ವಯರಿಂಗ್ ಹೊತ್ತಿ ಹೋಗಿರುವ ಘಟನೆ ಏ.19 ರಂದು ರಾತ್ರಿ ಕಲ್ಮಡ್ಕದಿಂದ ವರದಿಯಾಗಿದೆ.

ಏ.19 ರಂದು ರಾತ್ರಿ ಸಿಡಿಲಿನ ಬಡಿತಕ್ಕೆ
ಕಲ್ಮಡ್ಕ ಗ್ರಾಮದ ಮುಚ್ಚಿಲ ಕಜೆ ಅಬ್ಬಾಸ್ ಎಂಬವರ ಹಟ್ಟಿಯಲ್ಲಿದ್ದ ಕರು ವೊಂದು ಬಲಿಯಾಗಿದೆ. ಅವರ ಮನೆಯ ಸಂಪೂರ್ಣ ವಯರಿಂಗ್, ಸ್ವಿಚ್ ಬೊರ್ಡ್ ಗಳು ಹೊತ್ತಿ
ಹೋಗಿದ್ದು ಮನೆಯವರು ಅಪಾಯದಿಂದ ಪಾರಾಗಿದ್ದಾರೆ.ಸಿಡಿಲಿನ ಬಡಿತದಿಂದಾಗಿ ಅಪಾರ ನಷ್ಟ ಸಂಭವಿಸಿದೆ.