ಕೊಯಿನಾಡು ಸುನ್ನಿ ಮುಸ್ಲಿಂ ಜುಮ್ಮಾ ಮಸೀದಿಗೆ ನೂತನ ಖತೀಬರಾಗಿ ಮುಹಮ್ಮದ್ ಸಖಾಫಿ ಅಲ್ ಹಿಕಮಿ,ಸದರ್ ಮುಅಲ್ಲಿಂರಾಗಿ ಮುಹಮ್ಮದ್ ನೌಶಾದ್ ಫಾಳಿಲಿ

0

ಕೊಯಿನಾಡು ಸುನ್ನಿ ಜಮ್ಮಾ ಮಸೀದಿಗೆ ನೂತನ ಖತೀಬರಾಗಿ ಮುಹಮ್ಮದ್ ಸಖಾಫಿ ಅಲ್ ಹಿಕಮಿ ಕೊಟ್ಟಂಬಡಿ ಹಾಗೂ ಸದರ್ ಮುಅಲ್ಲಿಂರಾಗಿ ಮುಹಮ್ಮದ್ ನೌಶಾದ್ ಫಾಳಿಲಿ ಪೈಂಬಚ್ಚಾಲ್ ರವರು ಕರ್ತವ್ಯಕ್ಕೆ ಹಾಜರಾಗಿರುತ್ತಾರೆ.

ಮುಹಮ್ಮದ್ ಸಖಾಫಿ ರವರು ಈ ಮೊದಲು ಸುಳ್ಯ ಮೊಗರ್ಪಣೆ ಹಿದಾಯತುಲ್ ಇಸ್ಲಾಂ ಹಯ್ಯರ್ ಸೆಕೆಂಡರಿ ಮದರಸದ ಸದರ್ ಮು ಅಲ್ಲಿಮ್ ರಾಗಿ ಸುಮಾರು ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಬಳಿಕ ಕಾಸರಗೋಡು ಪರಿಸರದ ಮಸೀದಿಯಲ್ಲಿ ಖತೀಬರಾಗಿ ಸೇವೆ ಸಲ್ಲಿಸಿ, ಇದೀಗ ಕೊಯಿನಾಡಿಗೆ ಬಂದಿರುತ್ತಾರೆ.
ಇವರು ಸುಳ್ಯ ತಾಲೂಕು ಸುನ್ನಿ ಜಮ್ಮಿಯ್ಯತುಲ್ ಮುಅಲ್ಲಿಮೀನ್ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸುಳ್ಯ ತಾಲೂಕಿನಲ್ಲಿ ಗುರುತಿಸಿಕೊಂಡಿದ್ದರು.