ಪಂಜ :ಮುಂಜಾನೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಮತದಾನ

0

ಲೋಕಸಭಾ ಚುನಾವಣೆ ಏ.28 ರಂದು ಮುಂಜಾನೆ 7 ಗಂಟೆಯಿಂದ ಆರಂಭ ಗೊಂಡಿದ್ದು ಸಂಜೆ 6 ಗಂಟೆ ತನಕ ನಡೆಯಲಿದೆ.ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಂಜಾನೆಯಿಂದಲೇ ಮತದಾರರು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. ಶಾಲೆಯ ದ್ವಾರ ಬಳಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತಯಾಚನೆ ಮಾಡುತ್ತಿದ್ದಾರೆ.

ಪಂಜ ಗ್ರಾಮ ಪಂಚಾಯತ್ ನ ಐವತ್ತೊಕ್ಲು ಮತ್ತು ಕೂತ್ಕುಂಜ ಗ್ರಾಮದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಗೆ ಒಟ್ಟು ಸುಮಾರು 4461 ಮತದಾರರಿದ್ದಾರೆ. ಒಟ್ಟು 5 ಮತಗಟ್ಟೆ ಇದೆ.

ಐವತ್ತೊಕ್ಲು ಗ್ರಾಮದ ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಮೂರನೇ ವಾರ್ಡ್ ನ ಮತಗಟ್ಟೆಯಲ್ಲಿ 1246 , ಐವತ್ತೊಕ್ಲು ಗ್ರಾಮದ ಕರಿಕಳ ಪ್ರಾಥಮಿಕ ಶಾಲೆಯ ಒಂದನೇ ವಾರ್ಡಿನ ಮತಗಟ್ಟೆಯಲ್ಲಿ 953, ಐವತ್ತೊಕ್ಲು ಗ್ರಾಮದ ಪಾಂಡಿಗದ್ದೆ ಪ್ರಾಥಮಿಕ ಶಾಲೆಯ ಎರಡನೇ ವಾರ್ಡಿನ ಮತಗಟ್ಟೆಯಲ್ಲಿ 779, ಕೂತ್ಕುಂಜ ಗ್ರಾಮದ ಅಡ್ಡತ್ತೋಡು ಶಾಲೆಯ ಒಂದನೇ ವಾರ್ಡಿನ ಮತಗಟ್ಟೆಯಲ್ಲಿ 596, ಕೂತ್ಕುಂಜ ಗ್ರಾಮದ ನಾಗತೀರ್ಥ ಪ್ರಾಥಮಿಕ ಶಾಲೆಯ ಎರಡನೇ ವಾರ್ಡಿನ ಮತಗಟ್ಟೆಯಲ್ಲಿ 892 ಮತದಾರರಿದ್ದಾರೆ.