ಹಳೆಗೇಟು : ಹಕ್ಕು ಚಲಾಯಿಸಲು ವಿದೇಶದಿಂದ ಬಂದ ಮತದಾರ

0

ಸುಳ್ಯ ಹಳೆಗೇಟು ಅಡ್ಕ ನಿವಾಸಿ ಹೈದರ್ ಕುಕ್ಕುಂಬಳ್ಳ ಎಂಬುವವರು ವಿದೇಶದಿಂದ ಬಂದು ತನ್ನ ಮತದಾನದ ಹಕ್ಕನ್ನು ಇಂದು ಚಲಾಯಿಸಿದರು.


ಇವರು ಕಳೆದ ಹಲವಾರು ವರ್ಷಗಳಿಂದ ಬಹರೈನ್ ನಲ್ಲಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು ಇವರು ಕಳೆದ ಮೂರು ತಿಂಗಳ ಹಿಂದೆಯಷ್ಟೇ ಊರಿನಿಂದ ವಿದೇಶಕ್ಕೆ ತೆರಳಿದ್ದರು.


ಮತದಾನದ ಹಿನ್ನೆಲೆಯಲ್ಲಿ ಅವರು ಕಳೆದ ಒಂದು ವಾರಗಳ ಹಿಂದೆ ಊರಿಗೆ ಬಂದಿದ್ದು ಇಂದು ಸುಳ್ಯದ ಮತಗಟ್ಟೆ ಸಂಖ್ಯೆ 176 ರಲ್ಲಿ ಮತವನ್ನು ಚಲಾಯಿಸಿದರು.