ಪೈಚಾರು ಜಂಕ್ಷನ್ ನಲ್ಲಿ ಇನೋವಾ ಕಾರಿನ ಹಿಂಬದಿಗೆ ಡಿಕ್ಕಿಯಾದ ಬೈಕ್

0

ಸುಳ್ಯ ಪೈಚಾರಿನ ಜಂಕ್ಷನ್ ನಲ್ಲಿ ಇನೋವಾ ಕಾರಿಗೆ ಬೈಕೊಂದು ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ.

ಮೈಸೂರಿನಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಇನೋವಾ ಕಾರು ಸಡನ್ನಾಗಿ ಬ್ರೇಕ್ ಹಾಕಿದ ಪರಿಣಾಮ ಹಿಂದುಗಡೆಯಿಂದ ಬರುತ್ತಿದ್ದ ಬೈಕಿನ ಸವಾರನಿಗೆ ನಿಯಂತ್ರಣ ಸಿಗದೆ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆಯಿತು. ಇದರಿಂದಾಗಿ ಕಾರಿನ ಬಂಪರ್ ಮತ್ತು ಬೈಕಿನ ಮುಂದುಗಡೆಯ ಭಾಗ ಜಖಂಗೊಂಡಿತು. ಸವಾರರಿಬ್ಬರು ಅಲ್ಪ ಸ್ವಲ್ಪ ಗಾಯಗೊಂಡು ಪಾರಾಗಿದ್ದಾರೆ.