ಪರಿವಾರಕಾನ ರವೀಂದ್ರ ಪೂಜಾರಿ ಯವರ ಮನೆಯಲ್ಲಿ ಕಲ್ಲುರ್ಟಿ ದೈವದ ಪ್ರತಿಷ್ಠೆ ಹಾಗೂ ದೈವದ ಕೋಲ

0

ಸುಳ್ಯ ಪರಿವಾರಕಾನದಲ್ಲಿರುವ ರಂಜಿತ್ ಬೇಕರಿಯ ಮಾಲಕ ರವೀಂದ್ರ ಪೂಜಾರಿ ಯವರ ಮನೆಯಲ್ಲಿ ಶ್ರೀ ‌ಕಲ್ಲುರ್ಟಿ ದೈವದ ಪ್ರತಿಷ್ಠಾ ಕಾರ್ಯ ವು ಏರ್ಯ ರಘುರಾಮ ಮಯ್ಯ ಬಂಟ್ವಾಳ ರವರ ನೇತೃತ್ವದಲ್ಲಿ ಮೇ.10 ರಂದು ನಡೆಯಿತು.

ಮಧ್ಯಾಹ್ನ ಪ್ರತಿಷ್ಠಾ ಕಾರ್ಯ ದ ನಂತರ ಮಹಾಪೂಜೆಯಾಗಿ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.
ಅದೇ ದಿನ ಸಂಜೆ ಶ್ರೀ ದೈವದ ಭಂಡಾರ ಏರಿ ಕಲ್ಲುರ್ಟಿ ದೈವದ ಕೋಲವು ನಡೆಯಿತು.


ಈ ಸಂದರ್ಭದಲ್ಲಿ ರವೀಂದ್ರಪೂಜಾರಿ ,
ಶ್ರೀಮತಿ ರೇವತಿ,
ರಂಜಿತ್ ಪೂಜಾರಿ ಯವರು ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು.
ಕುಟುಂಬಸ್ಥರು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಿ ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.