ನವೀಕರಣಗೊಂಡಿರುವ ಕೊಯಿಕುಳಿ ಶ್ರೀಕೃಷ್ಣ ಮಂದಿರದ ಪ್ರವೇಶೋತ್ಸವ

0


ದುಗ್ಗಲಡ್ಕದ ಕೊಯಿಕುಳಿಯಲ್ಲಿ ನವೀಕರಣಗೊಂಡಿರುವ ಶ್ರೀ ಕೃಷ್ಣ ಮಂದಿರದ ಪ್ರವೇಶೋತ್ಸವ ಇಂದು ನಡೆಯಿತು.


ಬೆಳಿಗ್ಗೆ ವೇ.ಬ್ರ.ಚೂಂತಾರು ಮಹೇಶ್ ಭಟ್ ರ ನೇತೃತ್ವದಲ್ಲಿ ಗಣಪತಿ ಹವನ, ಬಳಿಕ ಭಜನಾ ಕಾರ್ಯಕ್ರಮ ನಡೆಯಿತು.


ಈ ಸಂಧರ್ಭದಲ್ಲಿ ಭಜನಾ ಮಂದಿರದ ಸ್ಥಾಪಕರಾದ ಎಂ.ಸ್ವಯಂಪ್ರಕಾಶ್ ನೀರಬಿದಿರೆ, ಸೇವಾ ಸಮಿತಿ ಅಧ್ಯಕ್ಷ ಶಶಿಧರ ಎಂ.ಜೆ., ಪದಾಧಿಕಾರಿಗಳು, ಭಕ್ತಾಧಿಗಳು ಉಪಸ್ಥಿತರಿದ್ದರು.
ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಭಜನೆ, ಪ್ರಸಾದ ವಿತರಣೆ ನಡೆಯಲಿದೆ.