ವಾರೀಸುದಾರರಿಲ್ಲದೆ ಅನಾಥವಾದ ಶವ

0

ಪೊಲೀಸ್ ಇಲಾಖೆಯಿಂದ ಸುಳ್ಯದಲ್ಲಿ ದಫನ ಕಾರ್ಯ

ಕಳೆದ ಒಂದು ವಾರದ ಹಿಂದೆ ಸುಳ್ಯದ ಅರಂಬೂರು ಬಳಿ ಅನಾಥವಾಗಿ ಸಿಕ್ಕಿದ್ದ ಅಪರಿಚಿತ ವ್ಯಕ್ತಿಯ ಮೃತ ದೇಹವನ್ನು ವಾರಿಸುವುದಾರರು ಯಾರೂ ಬಾರದ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸ್ ಇಲಾಖೆ ಹಾಗೂ ನಗರ ಪಂಚಾಯತ್ ಜಂಟಿಯಾಗಿ ಸುಳ್ಯದ ಕೇರ್ಪಳ ಹಿಂದೂ ರುದ್ರಭೂಮಿಯಲ್ಲಿ ದಫನ ಕಾರ್ಯ ನಿರ್ವಹಿಸಿದರು.


ಪ್ರಗತಿ ಆಂಬುಲೆನ್ಸ್ ನ ಮಾಲಕ ಅಚ್ಚು ಪ್ರಗತಿಯವರು ದಫನ ಕಾರ್ಯದಲ್ಲಿ ತೊಡಗಿಕೊಂಡರು.


ಕಳೆದ ಒಂದು ವಾರದಿಂದ ಸುಳ್ಯದ ಕೆವಿಜಿ ಆಸ್ಪತ್ರೆಯ ಶೀತಲೀಕರಣ ಘಟಕದಲ್ಲಿ ಇರಿಸಲಾಗಿದ್ದು, ಸಂಬಂಧಿಕರು ಯಾರಾದರೂ ಇದ್ದರೆ ಮೃತದೇಹವನ್ನು ಪಡೆದುಕೊಂಡು ಹೋಗುವಂತೆ ಸುಳ್ಯ ಪೊಲೀಸ್ ಠಾಣೆಯಿಂದ ಪತ್ರಿಕಾ ಪ್ರಕಟಣೆಯನ್ನು ನೀಡಲಾಗಿತ್ತು.


ಘಟನೆ ನಡೆದು ವಾರವಾದರೂ ಮನೆಯವರು ಯಾರೂ ಬಾರದ ಹಿನ್ನೆಲೆಯಲ್ಲಿ ಮೇ ೨೧ರಂದು ಸಂಜೆ ದಫನ ಮಾಡಲಾಗಿದೆ. ಈ ವೇಳೆ ಸ್ಥಳೀಯ ಪಂಚಾಯತ್ ಸಿಬ್ಬಂದಿಗಳು, ಸುಳ್ಯ ಪೊಲೀಸ್ ಠಾಣೆಯ ಅನು ಕುಮಾರ್, ಮಹಿಳಾ ಪೊಲೀಸ್ ಸಿಬ್ಬಂದಿ ಮಮತಾ ಮತ್ತಿತರರು ಉಪಸ್ಥಿತರಿದ್ದರು.