ಪೇರಾಲಿನಲ್ಲಿ ಬಜಪ್ಪಿಲ ನೇಮೋತ್ಸವ : ಸಾವಿರಾರು ಭಕ್ತರ ಉಪಸ್ಥಿಯಲ್ಲಿ ನಡೆದ ಮಡಕ ಜಾತ್ರೆ

0

ಮಂಡೆಕೋಲು ಗ್ರಾಮದ ಪೇರಾಲು ಶ್ರೀ ಬಜಪಿಲ ಉಳ್ಳಾಕುಲು, ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಕ್ಷೇತ್ರದಲ್ಲಿ ಮೇ.೨೪ರಂದು ಕೂಡಿ ಮೇ.೨೫ರಂದು ಶ್ರೀ ಬಜಪ್ಪಿಲ ನೇಮೋತ್ಸವ (ಮಡಕ ಜಾತ್ರೆ) ನಡೆಯಿತು.


ಮೇ.೨೫ರಂದು ಬೆಳಗ್ಗೆ ಭಂಡಾರ ತೆಗೆಯಲಾಯಿತು. ಬಳಿಕ ಕುತ್ಯಾಡಿಗೆ ಹೋಗಿ ಅಲ್ಲಿ ಅಡ್ಡಣಪೆಟ್ಟು ಉತ್ಸವ ನಡೆಯಿತು. ಬಳಿಕ ಮಾಡಕ್ಕೆ ಭಂಡಾರ ಬಂದು ಶ್ರೀ ದೈವಗಳ ನೇಮೋತ್ಸವ ನಡೆಯಿತು. ಬಳಿಕ ಸಿರಿಮುಡಿ ಗಂಧ ಪ್ರಸಾದ ವಿತರಣೆ ನಡೆದು, ಅನ್ನಸಂತರ್ಪಣೆ ಜರುಗಿತು. ಸಾವಿರಾರು ಭಕ್ತರ ಉಪಸ್ಥಿಯಲ್ಲಿ ಕಾರ್ಯಕ್ರಮ ನಡೆಯಿತು. ದೈವಸ್ಥಾನದ ಆಡಳಿತ ಮೊಕ್ತೇಸರು ಆಡಳಿತ ಸಮಿತಿ ಅಧ್ಯಕ್ಷರು ಆಗಿರುವ ಹೇಮಂತ್ ಕುಮಾರ್ ಗೌಡರಮನೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಬಾಳೆಕೋಡಿ, ದೈವಸ್ಥಾನದ ಪೂಜಾರಿ ದಿನೇಶ್ ರೈ ದರ್ಖಾಸ್ತು ಹಾಗೂ ಪೇರಾಲು ಹದಿನಾರು ಮನೆಯವರು ಹಾಗೂ ಊರ ಹತ್ತು ಸಮಸ್ತರು ಉಪಸ್ಥಿತಿದ್ದರು.