ಸುಬ್ರಹ್ಮಣ್ಯ: ಡಾl ನಿಂಗಯ್ಯರಿಗೆ ಎಸ್.ಎಸ್.ಪಿ.ಯು ಕಾಲೇಜು ವತಿಯಿಂದ ಬೀಳ್ಕೊಡುಗೆ, ಗೌರವಾರ್ಪಣೆ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯಾಗಿ, ಕಾಲೇಜಿನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಡಾ.ನಿಂಗಯ್ಯ ಅವರಿಗೆ ಎಸ್‌ಎಸ್‌ಪಿಯು ಕಾಲೇಜಿನ ವತಿಯಿಂದ ಜೂ.1 ಬೀಳ್ಕೊಡುಗೆ ಮತ್ತು ಗೌರವಾರ್ಪಣಾ ನಡೆಯಿತು.

ಡಾ.ನಿಂಗಯ್ಯ ಅವರು ಸಭಾಂಗಣಕ್ಕೆ ಆಗಮಿಸುವ ಸಂದರ್ಭ ಕಾಲೇಜಿನ ಸುಮಾರು 800ಕ್ಕೂ ಅಧಿಕ ವಿದ್ಯಾರ್ಥಿಗಳು ಎದ್ದು ನಿಂತು ಹೂಮಳೆಗೆರೆಯುವ ಮೂಲಕ ಕರತಾಡಣ ಮಾಡಿದರು. ವೇದಿಕೆಗೆ ಆಗಮಿಸಿದವರನ್ನು ಪ್ರಾಚಾರ್ಯ ಸೋಮಶೇಖರ ನಾಯಕ್ ಡಾ.ನಿಂಗಯ್ಯ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು.
ಡಾ.ನಿಂಗಯ್ಯ ಅವರ ಪತ್ನಿ ನಾಗರತ್ನ, ಶ್ರೀ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಪ್ರೌಢಶಾಲಾ ಮುಖ್ಯಗುರು ಕೆ.ಯಶವಂತ ರೈ, ಆಯ್ಕೆ ಶ್ರೇಣಿ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್, ಹಿರಿಯ ಉಪನ್ಯಾಸಕ ಎಂ.ಕೃಷ್ಣ ಭಟ್, ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್, ಹಿರಿಯ ಉಪನ್ಯಾಸಕರಾದ ಜಯಶ್ರೀ.ವಿ.ದಂಬೆಕೋಡಿ, ಗಿರೀಶ್,ಜಯಪ್ರಕಾಶ್.ಆರ್, ಉಪನ್ಯಾಸಕರಾದ ಮನೋಜ್ ಕುಮಾರ್ ಬಿ.ಎಸ್, ಜ್ಯೋತಿ.ಪಿ.ರೈ, ಯೋಗಣ್ಣ ಎಂ.ಎಸ್, ಸೌಮ್ಯಾ ದಿನೇಶ್, ಸುಧಾ, ಪೂರ್ಣಿಮಾ, ಸೌಮ್ಯಕೀರ್ತಿ ವೇದಿಕೆಯಲ್ಲಿದ್ದರು.ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಲೋಕೇಶ್ ಬಿ.ಎನ್, ಶ್ರೀ ದೇವಳದ ನಂದೀಶ್ ಕಟ್ರಮನೆ, ಕಾಲೇಜಿನ ಸಿಬ್ಬಂದಿ ಮಹೇಶ್ ಕುಮಾರ್ ಕೆ.ಎಚ್ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಸವಿತಾ ಕೈಲಾಸ್, ಪ್ರವೀಣ್ ಎರ್ಮಾಯಿಲ್, ಶ್ರೀಧರ್ ಪುತ್ರನ್, ಜಯಪ್ರಕಾಶ್.ಆರ್ ಅನಿಸಿಕೆ ಮೂಲಕ ಶುಭ ಹಾರೈಸಿದರು.ಆಯ್ಕೆ ಶ್ರೇಣಿ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್ ಸ್ವಾಗತಿಸಿದರು. ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ್ ಪುತ್ರನ್ ವಂದಿಸಿದರು.