ಬೇಂಗಮಲೆ : ಹಠಾತ್ ರಸ್ತೆ ದಾಟಿದ ಕಾಡು ಹಂದಿ

0

ಬೈಕಿಗೆ ಡಿಕ್ಕಿ – ಸವಾರನಿಗೆ ಗಾಯ – ಆಸ್ಪತ್ರೆ ದಾಖಲು

ಐವರ್ನಾಡು ಗ್ರಾಮದ ಬೇಂಗಮಲೆ ಯಲ್ಲಿ ಕಾಡು ಹಂದಿಯೊಂದು ಹಠಾತ್ ರಸ್ತೆ ದಾಟುವಾಗ ಬೈಕಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಗಾಯಗೊಂಡ ಘಟನೆ ಜೂ.೦೮ ರಂದು ರಾತ್ರಿ ನಡೆದಿದೆ.


ಐವರ್ನಾಡಿನ ಕೋಡ್ತಿಲು
ಚಂದ್ರಕಾಂತ ಎಂಬವರು ಸುಳ್ಯ ಕಡೆಯಿಂದ ಬೇಂಗಮಲೆ ಮಾರ್ಗವಾಗಿ ಐವರ್ನಾಡು ಕಡೆಗೆ ಹೋಗುವಾಗ ಬೇಂಗಮಲೆಯಲ್ಲಿ ಕಾಡುಹಂದಿ ಬೈಕಿಗೆ ಡಿಕ್ಕಿ ಹೊಡೆಯಿತು.


ಪರಿಣಾಮ ಬೈಕ್ ಮಗುಚಿ ಬಿದ್ದು, ಸವಾರನ ತಲೆಗೆ ಗಾಯವಾಯಿತು.

ಇದನ್ನು ಕಂಡ ಹಿಂದಿನಿಂದ ಹೋಗುತ್ತಿರುವ ವಾಹನದವರು ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿರುವುದಾಗಿ ತಿಳಿದು ಬಂದಿದೆ.