ಸುಳ್ಯ : ವೃದ್ಧೆಗೆ ಹಿಂದಿನಿಂದ ಗುದ್ದಿದ ಬಸ್ – ಅಪಾಯದಿಂದ ಪಾರು

0

ಸುಳ್ಯ ಕಟ್ಟೆಕಾರ್ ಜಂಕ್ಷನ್ ಬಳಿ ರಸ್ತೆ ದಾಟುತ್ತಿದ್ದ ವೃದ್ಧೆಯೊಬ್ಬರಿಗೆ ಹಿಂದಿನಿಂದ ಬಂದ ಬಸ್ಸೊಂದು ಗುದ್ದಿ ಮಹಿಳೆ ಅಲ್ಪಸ್ವಲ್ಪ ಗಾಯಗಳಿಂದ ಪಾರಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಮಹಿಳೆಗೆ ಗುದ್ದಿ ಬಸ್ ನಿಲ್ಲಿಸಿದ ಕಾರಣ ಮಹಿಳೆಗೆ ಯಾವುದೇ ಗಾಯವಾಗಿಲ್ಲ. ಸುಳ್ಯದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮಹಿಳೆ ಮನೆಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತವಾಗುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.