ತೊಡಿಕಾನ ಶಾಲಾ ಮಂತ್ರಿ ಮಂಡಲ ರಚನೆ

0

ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ತೊಡಿಕಾನ ಇಲ್ಲಿನ 2024 – 25 ನೇ ಸಾಲಿನ ಶಾಲಾ ಮಂತ್ರಿ ಮಂಡಲವನ್ನು ಚುನಾವಣೆ ಮಾದರಿಯಲ್ಲಿ ರಚಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕ ಅರುಣ್ ಕುಮಾರ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಶಾಲಾ ಸಹಶಿಕ್ಷಕರು ಮತಗಟ್ಟೆ ಅಧಿಕಾರಿಗಳಾಗಿ ಸಹಕರಿಸಿದರು.


ಶಾಲಾ ಮುಖ್ಯಮಂತ್ರಿಯಾಗಿ ಸುಜನ್ ಜಿ. ಎ, ಉಪ ಮುಖ್ಯಮಂತ್ರಿಯಾಗಿ ಹವ್ಯಾಸ್ ಕೆ. ಆರ್ ಆಯ್ಕೆಯಾದರು. ಗೃಹ ಮಂತ್ರಿಯಾಗಿ ಗವಿನ್ ಕೆ, ಪ್ರಮೋದ್ ಎ, ನೀರಾವರಿ ಮಂತ್ರಿಯಾಗಿ ರಂಜಿತ್ ಕುಮಾರ್ ಡಿ, ಅಭಿಷೇಕ್ ಕುಮಾರ್, ವಿದ್ಯಾ ಮಂತ್ರಿಯಾಗಿ ರಕ್ಷಿತಾ ಎನ್. ಯಚ್, ಶಮಂತ್ ಎಸ್. ಎಸ್, ಅರೋಗ್ಯ ಮತ್ತು ಸ್ವಚ್ಛತಾ ಮಂತ್ರಿಯಾಗಿ ಶ್ರಾವ್ಯ ಬಿ. ಎನ್, ಹರ್ಷಿತ ಹೆಚ್, ಕ್ರೀಡಾ ಮಂತ್ರಿಯಾಗಿ ಧನ್ವಿತ್ ಎ. ಎಸ್, ಪ್ರತುಲ್ ಆರ್, ಶಿಸ್ತು ಮಂತ್ರಿಯಾಗಿ ಕೀರ್ತಿಕಾ ಪಿ. ಎಸ್, ಪ್ರೀತಿಕಾ ಕೆ. ವಿ, ಸಾಂಸ್ಕೃತಿಕ ಮಂತ್ರಿಯಾಗಿ ಪವನ್ ಎನ್. ಎಸ್, ಮನ್ವಿತಾ ಕೆ. ಎಸ್, ಆಹಾರ ಮಂತ್ರಿಯಾಗಿ ಅನನ್ಯ ಎ, ಚಸ್ಮಿತಾ ಎ ಎನ್, ಕೃಷಿ ಮಂತ್ರಿಯಾಗಿ ಹರ್ಷ ಎ. ಎಸ್, ಮನ್ವಿತ್ ಎಂ, ಕಾನೂನು ಮಂತ್ರಿಯಾಗಿ ಚಿಂತನ್ ಡಿ. ಎಚ್, ಪ್ರಶ್ವಿ ಬಿ, ವಿರೋಧ ಪಕ್ಷದ ನಾಯಕಿಯಾಗಿ ಶ್ರಾವ್ಯ ಡಿ. ವಿ, ಸಭಾಪತಿ ಯಾಗಿ ಶೃತಿಕಾ ಆರ್ ಇವರನ್ನು ಆಯ್ಕೆ ಮಾಡಲಾಯಿತು.