ಅರಂತೋಡು ಎನ್ ಎಂ ಸಿ ಯ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿ ಸಂಸತ್ತು ಚುನಾವಣೆ

0

ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಇಲ್ಲಿ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿ ನಾಯಕ ಮತ್ತು ಉಪನಾಯಕನ ಸ್ಥಾನಕ್ಕೆ ಚುನಾವಣೆ ನಡೆಯಿತು. ಚುನಾವಣಾಧಿಕಾರಿ ಕಿಶೋರ್ ಕುಮಾರ್ ವರು ಚುನಾವಣೆ ಯನ್ನು ಪ್ರಜಾಪ್ರಭುತ್ವ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ನಡೆಸಲಾಯಿತು.

ಸ್ಪರ್ಧೆಯ ಕಣದಲ್ಲಿ ನಾಯಕ ಸ್ಥಾನಕ್ಕೆ ಪ್ರಥಮ್ ಜಿ ಎ ಹಾಗೂ ಸುಖೇಶ್ ಟಿ ಎಸ್ ನಡುವೆ ನೇರ ಹಣಾಹಣಿ ನಡೆದು ಸುಖೇಶ್ ಟಿ ಎಸ್ 36 ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ. ಉಪನಾಯಕನ ಸ್ಥಾನದ ಸ್ಪರ್ಧಾ ಕಣದಲ್ಲಿ ಲೇಖನ ಪ್ರಿಯಾ ಎಂ ಹಾಗೂ ಲತೀಶ್ ಎ ಎನ್ ರವರು ಇದ್ದು ಲೇಖನಪ್ರಿಯಾ ರವರು ಭರ್ಜರಿ 112 ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ.

ಮತಗಣನೆಯ ನಂತರ ಮುಖ್ಯ ಶಿಕ್ಷಕರಾದ ಎಂ ಕೆ ಸೀತಾರಾಮ ರವರು ವಿಜಯಿ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು. ಶಿಕ್ಷಕ ಮನೋಜ್ ಯು ಎಸ್ ಬ್ಯಾಲೆಟ್ ಪೇಪ‌ರ್ ಮೂಲಕ ಮತದಾನ ಮಾಡಲು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು