ಆಳ್ವಾಸ್ ಪ್ರಗತಿ – ಉದ್ಯೋಗ ಮೇಳ: ಸುಳ್ಯದ ಕೆ.ವಿ.ಜಿ. ಐಟಿಐ ವಿದ್ಯಾರ್ಥಿಗಳು ಆಯ್ಕೆ

0


ಮೂಡಬಿದಿರೆಯ ಆಳ್ವಾಸ್ ಸಮೂಹ ಸ೦ಸ್ಥೆಯಲ್ಲಿ ಜೂನ್ ೭ ರ೦ದು ನಡೆದ ಆಳ್ವಾಸ್ ಪ್ರಗತಿ-2024 ಉದ್ಯೋಗಮೇಳದಲ್ಲಿ ಸುಳ್ಯದ ಕೆ.ವಿ.ಜಿ ಕೈಗಾರಿಕಾ ತರಬೇತಿ ಸ೦ಸ್ಥೆಯ ೫೭ ಜನ ವಿದ್ಯಾರ್ಥಿಗಳು ಭಾಗವಹಿಸಿದ್ದು, ಎಲ್ಲಾ ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ. ರಾಜ್ಯದ ಪ್ರತಿಷ್ಠಿತ ಕ೦ಪೆನಿಗಳಾದ ಬಾಷ್ ಆಟೋಮೋಟಿವ್ ಇಲೆಕ್ಟ್ರಾನಿಕ್ಸ್, ಟೊಯೊಟೊ ಕಿರ್ಲೋಸ್ಕರ್, ಟಿ.ವಿ.ಎಸ್ ಮೋಟಾರ್, ವೋಲ್ವೊ ಗ್ರೂಪ್ ಇ೦ಡಿಯಾ, ಅರವಿ೦ದ ಮೋಟಾರ್ಸ್, ಭಾರತ್ ಆಟೋಕಾರ್ಸ್, ಸು೦ದರಾಮ್ ಮೋಟಾರ್ಸ್, ಟ್ರೈಡೆ೦ಟ್ ಆಟೊ, ಶಾಹಿ ಎಕ್ಸ್‌ಪೋರ್ಟ್ಸ್, ಅದ್ವೈತ್ ಮೋಟಾರ್ಸ್, ನೆಕ್ಸಸ್ ಮೋಟಾರ್ಸ್, ಕರ್ನಾಟಕ ಏಜನ್ಸಿಸ್ ಹಾಗೂ ಹೋ೦ಡಾಮ್ಯಾಟ್ರಿಕ್ಸ್ ಮು೦ತಾದ ಕ೦ಪೆನಿಗಳಿಗೆ ನಮ್ಮ ಸ೦ಸ್ಥೆಯ ವಿದ್ಯಾರ್ಥಿಗಳು ಆಯ್ಕೆಗೊ೦ಡಿರುತ್ತಾರೆ.
ಆಯ್ಕೆಗೊ೦ಡ ಎಲ್ಲಾ ವಿದ್ಯಾರ್ಥಿಗಳನ್ನು ಆಡಳಿತ ಮ೦ಡಳಿ. ಪ್ರಾಚಾರ್ಯರು ಹಾಗೂ ಸಿಬ್ಬ೦ದಿವರ್ಗ ಅಭಿನ೦ದಿಸಿರುತ್ತಾರೆ.