ಮೆಟ್ಟಿನಡ್ಕ : ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಮತ್ತು ಹಣ್ಣಿನ ಗಿಡ ವಿತರಣೆ

0

ಬ್ಯಾಂಕ್ ಆಫ್ ಬರೋಡ ಸುಬ್ರಹ್ಮಣ್ಯ ಶಾಖೆ, ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ವಿಜಯ ಗ್ರಾಮ ಸಮಿತಿ ನಾಲ್ಕೂರು, ಅರಣ್ಯ ಇಲಾಖೆ ಸುಬ್ರಹ್ಮಣ್ಯ, ಶೌರ್ಯ ವಿಪತ್ತು ತಂಡ ನಾಲ್ಕೂರು ಇವುಗಳ ಸಹಯೋಗದೊಂದಿಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೆಟ್ಟಿನಡ್ಕ ಇಲ್ಲಿ ಶಾಲಾ ಮಕ್ಕಳಿಗೆ ಕಲಿಕೆಗೆ ಪೂರಕವಾಗಿ ಉಚಿತ ಪುಸ್ತಕಗಳನ್ನು ಹಾಗೂ ಪರಿಸರ ಬೆಳೆಸುವ ಉದ್ದೇಶಕ್ಕಾಗಿ ಹಣ್ಣಿನ ಗಿಡಗಳನ್ನು ಉಚಿತವಾಗಿ ನೀಡಲಾಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಅರಣ್ಯ ಇಲಾಖೆಯ ನಾಲ್ಕೂರು ಗಸ್ತಿನ ಅರಣ್ಯ ರಕ್ಷಕರಾದ ಧನಂಜಯ ರವರು ದೀಪ ಬೆಳಗಿಸಿ ಶುಭ ಹಾರೈಸಿದರು. ಸಭಾಧ್ಯಕ್ಷತೆಯನ್ನು ವಿಜಯ ಗ್ರಾಮ ಸಮಿತಿಯ ಅಧ್ಯಕ್ಷ ಡಿ ಆರ್.ಉದಯಕುಮಾರ ವಹಿಸಿದ್ದರು. ವೇದಿಕೆಯಲ್ಲಿ ಶೌರ್ಯ ವಿಪತ್ತು ತಂಡದ ಸಂಯೋಜಕರಾದ ಸತೀಶ ಬಂಬುಳಿ, ಎಸ್‌ಡಿಎಂಸಿ ಅಧ್ಯಕ್ಷ ರವಿ ಗುಂಡಡ್ಕ ಶಾಲಾ ಮುಖ್ಯೋಪಾಧ್ಯಾಯರಾದ ಕುಶಾಲಪ್ಪ ಪಿ. ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ವಿಜಯ ಗ್ರಾಮ ಸಮಿತಿಯ ಕಾರ್ಯದರ್ಶಿ ದಿನೇಶ್ ಹಾಲೆಮಜಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಶಾಲಾ ಎಸ್ ಡಿ ಎಂ ಸಿ ಸದಸ್ಯರು, ಮಕ್ಕಳ ಪೋಷಕರು, ಶಿಕ್ಷಕರು ಅಂಗನವಾಡಿ ಶಿಕ್ಷಕಿ ಕಮಲ, ಶಾಲಾ ಮಕ್ಕಳು ಸೇರಿದಂತೆ ಅನೇಕ ಮಂದಿ ಉಪಸ್ಥಿತರಿದ್ದರು. ಶಾಲಾ ಗೌರವ ಶಿಕ್ಷಕಿ ಅಪೂರ್ವ ಕೊಲ್ಯ ಕಾರ್ಯಕ್ರಮ ನಿರೂಪಿಸಿದರು. (ವರದಿ : ಡಿ.ಹೆಚ್)