ಸುಳ್ಯ ತಾಲೂಕು ಕಿಸಾನ್ ಸಂಘದಿಂದ ಮೆಸ್ಕಾಂ ಪವರ್ ಮೆನ್ ಗೆ ಸಹಾಯಧನ

0


ಸುಳ್ಯ ತಾಲೂಕು ಬಾಳಿಲ ಗ್ರಾಮದಲ್ಲಿ ಮೆಸ್ಕಾಂ ಸಿಬ್ಬಂದಿ ಆಗಿದ್ದ ಮಂಜುನಾಥ ರವರು ಕರ್ತವ್ಯದ ವೇಳೆ ಇತ್ತೀಚೆಗೆ ವಿದ್ಯುತ್ ಅವಘಡದಲ್ಲಿ ಸಿಲುಕ್ಕಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ.ಅವರಿಗೆ ನೆರವಾಗುವ ಸಲುವಾಗಿ ಕಿಸಾನ್ ಸಂಘದ ವತಿಯಿಂದ ಸಹಾಯಧನ ನೀಡಲಾಯಿತು.ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಪ್ರಭಾಕರ ರೈ, ಕಾರ್ಯದರ್ಶಿ ಸಾಯಿ ಶೇಖರ್ , ನೆಟ್ಟಾರು ಗೋಪಾಲಕೃಷ್ಣ ಭಟ್, ರಮೇಶ್ ಕೋಟೆ ,ಕರ್ವಂಕಲ್ಲು ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.