ರಾಜ್ಯದ ಜನತೆಯ ಜೇಬಿನಿಂದ ಹಣ ಕಸಿಯುತ್ತಿರುವ ಕಾಂಗ್ರೆಸ್ ಸರಕಾರ : ಬಿ ಜೆ ಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ

0

ಕರ್ನಾಟಕ ಸರ್ಕಾರ ಜನ ವಿರೋಧಿ ನೀತಿಯಿಂದ ಸಾಮಾನ್ಯ ಜನರು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಸಹಕಾರಿ ಸಂಘಗಳು ಚುನಾವಣಾ ಪೂರ್ವದಲ್ಲಿ ನೀಡಿರುವ ಭರವಸೆಯಾದ ಕೃಷಿ ಸಾಲವನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಸುತ್ತೇವೆ ಎಂದು ಹೇಳಿ ಜನರಿಗೆ ಮೋಸ ಮಾಡಿದ್ದಲ್ಲದೆ ಹಾಲಿನ ಸಹಾಯಧನವಾದ ಲೀಟರ್ 5 ರೂ ಇನ್ನು ಯಾರಿಗೂ ನೀಡುತ್ತಿಲ್ಲ ರಿಜಿಸ್ಟ್ರೇಷನ್ ಫೀಸು ದುಪ್ಪಟ್ಟು, ಚಾಪಕಾಗದ ಮೂರುಪಟ್ಟು ಮಾಡಿದ್ದಲ್ಲದೆ ಇದೀಗ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಳೆದ 2 ವರ್ಷದಿಂದ ಸ್ಥಿರತೆಯನ್ನು ಕಾಯ್ದಿರಿಸಿಕೊಂಡಿತ್ತು ಈಗ ಏಕಾಏಕಿ ಪೆಟ್ರೋಲ್ ಗೆ 3.00, ಡೀಸೆಲ್ ಗೆ 3.50 ರೂಪಾಯಿ ರಾಜ್ಯ ಸರ್ಕಾರ ಹೆಚ್ಚುವರಿ ತೆರಿಗೆ ಹಾಕಿ ರಾಜ್ಯದ ಜನತೆಗೆ ಎಲ್ಲಾ ರೀತಿಯಲ್ಲಿ ಮೋಸ ಮಾಡುತ್ತಿದೆ. ಇದನ್ನು ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ತೀವ್ರವಾಗಿ ವಿರೋಧಿಸುತ್ತಿದೆ. ತಕ್ಷಣ ಇದನ್ನು ಹಿಂದೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತದೆ. ಇದರಿಂದಾಗಿ ರಾಜ್ಯದ ಜನತೆಗೆ ಭಾಗ್ಯಗಳನ್ನು ನೀಡಿ, ಸಾಮಾನ್ಯ ಜನರು ಬೀದಿಗೆ ಬೀಳುವುದೇ ಕಾಂಗ್ರೆಸ್ ಗ್ಯಾರಂಟಿ ಎಂದು ಸುಳ್ಯ ಬಿ ಜೆ ಪಿ ಮಂಡಲ ಅಧ್ಯಕ್ಷ
ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.