ಬೆಂಗಳೂರಿನಲ್ಲಿ ಗೌಡ ಸಮಾಜದ ವತಿಯಿಂದ ಸಪ್ತಪದಿ 2024 ರ ವಿನೂತನ ಕಾರ್ಯಕ್ರಮ

0

ಕೊಡಗು ಮತ್ತು ದ.ಕ ಜಿಲ್ಲೆ ಗೌಡ ಸಮಾಜದ ವತಿಯಿಂದ ಭಾವೀ ವಧು ವರರ ಮುಖಾ ಮುಖಿ ಭೇಟಿ – 200 ಕ್ಕಿಂತ ಮಿಕ್ಕಿ ವಧು ವರರ ನೋಂದಾವಣೆ

ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಸಮಾಜದ ಬೆಂಗಳೂರಿನ ಘಟಕದ ವತಿಯಿಂದ ಭಾವೀ ವಧು ವರರ ಮುಖಾ ಮುಖಿ ಭೇಟಿ ಕಾರ್ಯಕ್ರಮ ಸಪ್ತಪದಿ 2024 ಲಗ್ಗೆರೆ ‘ನಮ್ಮನೆ’ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಜೂ.16 ರಂದು ‌ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಗೌಡ ಸಮಾಜದ ಬೆಂಗಳೂರು ಘಟಕದ ಅಧ್ಯಕ್ಷ ಪಾನತ್ತೆಲ ಪಳಂಗಪ್ಪ ರವರು ವಹಿಸಿದ್ದರು.
ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷ ನಾಗೇಶ್ ಕುಮಾರ್ ಕಲ್ಲುಮುಟ್ಲು, ಕಾರ್ಯದರ್ಶಿ ಸೋಮಣ್ಣ‌ ಕುಂಭಗೌಡನ, ಮಹಿಳಾ ಘಟಕದ ಅಧ್ಯಕ್ಷೆ
ಶ್ರೀಮತಿ ಶಶಿಪ್ರಭಾ ಮಡ್ತಿಲ,ಉಪಾಧ್ಯಕ್ಷೆ ನೆರಿಯನ ಗಂಗಮ್ಮ, ಕಾರ್ಯದರ್ಶಿ ಶ್ರೀಮತಿ ವನಿತಾರಾಧಾಕೃಷ್ಣ, ಯುವ ಘಟಕದ ಅಧ್ಯಕ್ಷ ದಯಾನಂದ ಕುಂಬ್ಲಾಡಿ ಉಪಸ್ಥಿತರಿದ್ದರು.


ಸುಮಾರು 200 ಕ್ಕಿಂತ ಮಿಕ್ಕಿ ವಧು ವರರು ಸಪ್ತ ಪದಿ ವೇದಿಕೆಯ ಮೂಲಕ ನೋಂದಾವಣೆ ಮಾಡಿಕೊಂಡರು. ಬಳಿಕ ವಧು ವರರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಶ್ರೀಮತಿ ಜ್ಯೋತಿ ಕುಶಾಲಪ್ಪ ಪ್ರಾರ್ಥಿಸಿದರು. ಶಶಿಪ್ರಭಾ ಮಡ್ತಿಲ ಸ್ವಾಗತಿಸಿದರು. ನೆರಿಯನ ಗಂಗಮ್ಮ ವಂದಿಸಿದರು. ಶ್ರೀಮತಿ ಲೀಲಾ ಸೋಮಣ್ಣ ಕುಂಭಗೌಡನ ಮತ್ತು ಗೋಪಾಲಕೃಷ್ಣ ಪಿತ್ತಿಲು ಕಾರ್ಯಕ್ರಮ ನಿರೂಪಿಸಿದರು.